ಭಾನುವಾರ, ಜೂನ್ 26, 2022
29 °C

Charlie 777: ರಕ್ಷಿತ್ ಶೆಟ್ಟಿಗೆ ಜನ್ಮದಿನದ ಉಡುಗೊರೆ ನೀಡಿದ ಪರಂವಾ ಸ್ಟುಡಿಯೊಸ್

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Paramvah Studios Twitter

ಬೆಂಗಳೂರು: ಕನ್ನಡದ ಜನಪ್ರಿಯ ನಟ 'ರಕ್ಷಿತ್ ಶೆಟ್ಟಿ' ಜೂನ್ 6ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ನಟಿಸುತ್ತಿರುವ 'ಚಾರ್ಲಿ 777' ಚಿತ್ರತಂಡ ವಿಶೇಷ ಉಡುಗೊರೆಯೊಂದನ್ನು ರಕ್ಷಿತ್‌ ಶೆಟ್ಟಿಗೆ ನೀಡಿದೆ.

ಚಾರ್ಲಿ 777 ಚಿತ್ರದ ಅಧಿಕೃತ ಟೀಸರ್ ಪರಂವಾ ಸ್ಟುಡಿಯೊಸ್ ಯೂಟ್ಯೂಬ್‌ ಖಾತೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಪಂಚಭಾಷೆಗಳಲ್ಲಿ ತಯಾರಾಗುತ್ತಿರುವ ಚಾರ್ಲಿ 777 ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.

ನಟ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದು, ಅಭಿಮಾನಿಗಳು ಕೂಡ ಶುಭ ಕೋರಿದ್ದಾರೆ.

ಮೂಲತಃ ಉಡುಪಿಯವರಾದ ರಕ್ಷಿತ್ ಶೆಟ್ಟಿ, 2010ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಮ್ ಏರಿಯಾಲ್ ಒಂದ್ ದಿನ ಎಂಬ ಅರವಿಂದ ಕೌಶಿಕ್ ನಿರ್ದೇಶನದ ಚಿತ್ರದ ಮೂಲಕ ರಕ್ಷಿತ್ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಅದಕ್ಕೂ ಮೊದಲು ಲೆಟ್ಸ್ ಕಿಲ್ ಗಾಂಧಿ ಮತ್ತು ಇತರ ಹಲವು ಕಿರುಚಿತ್ರಗಳನ್ನು ನಿರ್ಮಿಸಿದ್ದರು.

ಸಿಂಪಲ್ ಆಗಿ ಒಂದು ಲವ್ ಸ್ಟೋರಿ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳು ರಕ್ಷಿತ್ ಶೆಟ್ಟಿಗೆ ಜನಪ್ರಿಯತೆ ತಂದುಕೊಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು