ಸೋಮವಾರ, ಜೂನ್ 21, 2021
29 °C

ಮತ್ತೆ ಅದೃಷ್ಟ ಪರೀಕ್ಷೆಗೆ ಅನಿಲ್‌ ಸಿದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಗಾಡ್‌ ಕಿಸ್‌ ಯೂ’ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ ಅನಿಲ್‌ ಸಿದ್ದು. ಯುವ ನಟ ಅನಿಲ್ ಸಿದ್ದು ಮೂಲತಃ ಮೈಸೂರಿನ ವಿಜಯನಗರದವರು. ನಟನೆ, ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು, ಸಣ್ಣಪುಟ್ಟ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು.

ಮಣಿರತ್ನಂ ನಿರ್ದೇಶನದ ‘ಕಾರ್ಟ್ ವಿಲಯಾಡು’, ಎ.ಆರ್. ಮುರಗದಾಸ್ ನಿರ್ದೇಶನದ ‘ಕತ್ತಿ’, ಶಂಕರ್ ನಿರ್ದೇಶನದ ‘ಐ’, ಶ್ರೀರಾಘವ ಮುರಳಿ ನಿರ್ದೇಶನದ ‘ಮುಮ್ತಾಜ್’ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.

ಗುರುದೇಶಪಾಂಡೆ ನಿರ್ದೇಶನದ ‘ಪಡ್ಡೆಹುಲಿ’ಯಲ್ಲೂ ಅವರದ್ದು ಖಳ ಪಾತ್ರ. ಅವರು ನಾಯಕನಾಗಿ ಕಾಣಿಸಿಕೊಂಡದ್ದು ವಿಜಯ್‌ ಸೂರ್ಯ ನಿರ್ದೇಶನದ ಎ+ ಚಿತ್ರದಲ್ಲಿ. ಆ ಬಳಿಕ ಕೆಲಕಾಲ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದರು.

ಈಗ ಗಾಡ್‌ ಕಿಸ್‌ ಯೂ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಅನಿಲ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು