ಸೆಟ್ಟೇರಿತು ಹೊಂಬಾಳೆಯ ‘ದ್ವಿತ್ವ’

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಪುನೀತ್ ರಾಜ್‌ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿದೆ ‘ದ್ವಿತ್ವ’. ಜುಲೈ 1ರಂದು ಈ ಚಿತ್ರದ ಶೀರ್ಷಿಕೆ ಬಿಡುಗಡೆ ನಡೆದಿದೆ. ಇದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 9ನೆಯ ಚಿತ್ರ.
ಲೂಸಿಯಾ ಚಿತ್ರದ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಪವನ್ ಕುಮಾರ್ ಚಿತ್ರದ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. ಮನೋವಿಜ್ಞಾನದ ಹಿನ್ನೆಲೆಯ ಕಥೆಯೇ ದ್ವಿತ್ವ. ದ್ವಿತ್ವವನ್ನು ಸಾರುವ ಪೋಸ್ಟರ್ ಕೂಡಾ ಬಿಡುಗಡೆ ಆಗಿದೆ. 2018ರಲ್ಲಿ ಬಂದ ಯುಟರ್ನ್ ಚಿತ್ರದ ಬಳಿಕ ಪವನ್ ಅವರು ಕೈಗೆತ್ತಿಕೊಳ್ಳುತ್ತಿರುವ ಚಿತ್ರ ಇದು. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದೆ. ಸೆಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ ಎಂದು ತಂಡ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.