ಬೆಂಗಳೂರು: ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ ದರ ₹236(ಶೇ 18 ಜಿಎಸ್ಟಿ ಒಳಗೊಂಡು) ಆಗಿದೆ.

ಶನಿವಾರವೇ(ಸೆ.13) ಈ ದರ ಜಾರಿಯಾಗಿದೆ. ಏಕಪರದೆ ಚಿತ್ರಮಂದಿರಗಳು ₹100–₹150ರ ಟಿಕೆಟ್ ದರವನ್ನು ಮುಂದುವರಿಸಿವೆ. ಮಲ್ಟಿಫ್ಲೆಕ್ಸ್ಗಳಲ್ಲಿ ಕ್ಲಾಸಿಕ್, ಕ್ಲಾಸಿಕ್ ಪ್ಲಸ್, ಪ್ರೈಂ, ಎಕ್ಸ್ಟ್ರಾ ಲೆಗ್ರೂಂ, ರಿಕ್ಲೈನರ್ ಎಂಬ ಹೆಸರಿನಲ್ಲಿ ವಿಭಾಗಗಳಿದ್ದು, ಇವುಗಳೆಲ್ಲವುದಕ್ಕೂ ₹230–₹236 ದರ ನಿಗದಿಯಾಗಿದೆ. ಈ ಮೊದಲು ಕ್ಲಾಸಿಕ್ ವಿಭಾಗದಲ್ಲಿರುವ ಸೀಟಿಗೆ ಕಡಿಮೆ ದರ, ಪ್ರೈಂಗೆ ಅದಕ್ಕಿಂತ ಹೆಚ್ಚು ಹಾಗೂ ರಿಕ್ಲೈನರ್ಗಳಿಗೆ ₹500ಕ್ಕಿಂತಲೂ ಅಧಿಕ ದರವಿತ್ತು. ಪರಭಾಷಾ ನಟರ ಚಿತ್ರಗಳು ಬಂದ ಸಂದರ್ಭದಲ್ಲಿ ಪ್ಲೈಂ, ರಿಕ್ಲೈನರ್ಗಳ ದರ ₹1000 ತಲುಪಿದ ಉದಾಹರಣೆಗಳಿವೆ.

ಇದೀಗ ಮಲ್ಟಿಫ್ಲೆಕ್ಸ್ಗಳಲ್ಲಿ ಎಲ್ಲಾ ಸೀಟ್ಗಳಿಗೆ ₹236 ಟಿಕೆಟ್ ದರವಿದೆ. ಐಮ್ಯಾಕ್ಸ್ನಲ್ಲೂ ಕಡಿಮೆ ದರದಲ್ಲೇ ಸಿನಿಮಾ ನೋಡಬಹುದು. ಮಲ್ಟಿಫ್ಲೆಕ್ಸ್ಗಳು ಈ ಹಿಂದೆ ವಾರದ ದಿನಗಳಲ್ಲಿ ಕ್ಲಾಸಿಕ್, ಕ್ಲಾಸಿಕ್ ಪ್ಲಸ್ ಸೀಟುಗಳಿಗೆ ₹180–₹200ರವರೆಗೆ ಟಿಕೆಟ್ ದರ ನಿಗದಿಪಡಿಸುತ್ತಿದ್ದವು. ಮುಂದಿನ ವಾರದ ಟಿಕೆಟ್ ದರವನ್ನು ಗಮನಿಸಿದಾಗ ವಾರದ ದಿನಗಳಲ್ಲೂ ₹236 ದರವನ್ನು ಹಲವು ಮಲ್ಟಿಫ್ಲಕ್ಸ್ಗಳು ಮುಂದುವರಿಸಿವೆ. ಈ ಮೂಲಕ ಟಿಕೆಟ್ ದರ ಇಳಿಕೆಯ ನಷ್ಟ ಸರಿದೂಗಿಸಲು ಮಲ್ಟಿಫ್ಲೆಕ್ಸ್ಗಳ ಮುಂದಾಗಿವೆ. ಇದು ಕನ್ನಡ ಸಿನಿಮಾಗಳಿಗೆ ಹೊಡೆತ ನೀಡಬಹುದು.

ಆತಂಕಪಡಬೇಕಾಗಿಲ್ಲ: ನರಸಿಂಹಲು

ಸರ್ಕಾರದ ಈ ಆದೇಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು, ‘ಟಿಕೆಟ್ ದರ ಮಿತಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದವರು, ಸಮಿತಿಯ ಸದ್ಯಸರೆಲ್ಲರೂ ಕಾರಣರು. ಪ್ರಮುಖವಾಗಿ ಸಾ.ರಾ.ಗೋವಿಂದು ಅವರು ಸತತವಾಗಿ ಈ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸಿದ್ದರು. ಟಿಕೆಟ್ ದರ ಕಡಿಮೆ ಇದ್ದ ಸಂದರ್ಭದಲ್ಲಿ ಇಡೀ ಕುಟುಂಬವೇ ಚಿತ್ರಮಂದಿರಗಳಿಗೆ ಬರಲಿದೆ. ಗಳಿಕೆ ಕೊಂಚ ಕಮ್ಮಿ ಆಗಬಹುದು. ಆದರೆ ಹೆಚ್ಚಿನ ಜನರು ಸಿನಿಮಾ ನೋಡಿದ ಸಂದರ್ಭದಲ್ಲಿ ಅದು ಸರಿಹೊಂದಲಿದೆ. ಹೀಗಾಗಿ ದೊಡ್ಡ ಸಿನಿಮಾ ಮಾಡುವವರು ಯಾರೂ ಆತಂಕಪಡಬೇಕಾಗಿಲ್ಲ’ ಎಂದರು.

ಟಿಕೆಟ್ ದರ ಹೆಚ್ಚಿದ್ದರೆ ಸಿನಿಮಾ ನೋಡುವುದಿಲ್ಲ ಎನ್ನುವ ಕಾರಣಕ್ಕೇ ಈ ಮಿತಿ ಹಾಕಲಾಗಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಇದ್ದ ದರವೇ ಮುಂದುವರಿಯಲಿದೆ.
–ಕೆ.ವಿ.ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.