ಮುಂಬೈ: ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಕುರಿತ ‘ಸತ್ಯಪ್ರೇಮ್ ಕಿ ಕಥಾ‘, ಹಾಗೂ ‘ತು ಮೇರಿ ಮೈನ್ ತೇರಾ ಮೈನ್ ತೇರಾ ತು ಮೇರಿ’ ಚಿತ್ರಗಳಲ್ಲಿ ನಟಿಸಿರುವುದು ನನ್ನ ಅದೃಷ್ಟವೆಂದು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹೇಳಿಕೊಂಡಿದ್ದಾರೆ.

'ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ' ಕುರಿತು ಮಾತನಾಡಿರುವ ನಟ ಕಾರ್ತಿಕ್ ಆರ್ಯನ್, ‘ಈ ಚಿತ್ರದಲ್ಲಿ ನಟಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ಶ್ರೀಕಾಂತ್ ಶರ್ಮಾ ಅವರು ವಿಶಿಷ್ಟ ಕಥೆಗಳನ್ನು ಬರೆದರೆ, ಪ್ರೇಮಕಥೆ ಒಳಗೊಂದು ಸಂದೇಶವನ್ನು ತಿಳಿಸುವ ಮೂಲಕ ಸಮೀರ್ ಪ್ರೇಕ್ಷಕರನ್ನು ಸೆಳೆಯುತ್ತಾರೆ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ತು ಮೇರಿ ಮೈನ್ ತೇರಾ ಮೈನ್ ತೇರಾ ತು ಮೇರಿ‘ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಅನನ್ಯಾ ಪಾಂಡೆ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಡಿಸೆಂಬರ್25ರಂದು ಬಿಡುಗಡೆಯಾಗಲಿದೆ.

ನಟ ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಸತ್ಯಪ್ರೇಮ್ ಕಿ ಕಥಾ’ ಚಿತ್ರವನ್ನು ಸಮೀರ್ ಅವರು ನಿರ್ದೇಶನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.