ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಕಥಾ ಸಂಗಮ

Last Updated 7 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಏಳು ಕಥೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರ ಸಂಗಮದಲ್ಲಿ ಒಂದು ಸಿನಿಮಾ... ಅದುವೇ ‘ಕಥಾ ಸಂಗಮ’. ಪ್ರೇಮ ಕಥೆ, ಥ್ರಿಲ್ಲರ್‌, ಕ್ರೈಂ, ಸಸ್ಪೆನ್ಸ್‌... ಹೀಗೆ ಒಂದೊಂದು ಕಥೆಗಳು ಒಂದೊಂದು ಸಿನಿಮಾ ನೋಡಿದ ಅನುಭವ ನೀಡಲಿವೆಎನ್ನುವುದಕ್ಕೆ ‘ಕಥಾ ಸಂಗಮ’ ಚಿತ್ರದ ಟ್ರೈಲರ್‌ ಸಾಕ್ಷಿಯಂತಿದೆ.

ಪುಟ್ಟಣ್ಣ ಕಣಗಾಲ್‌ ಅವರು 70ರ ದಶಕದಲ್ಲಿ ನಾಲ್ಕು ಕಥೆಗಳ ‘ಕಥಾ ಸಂಗಮ’ ಸಿನಿಮಾ ನಿದೇಶಿಸಿ ದಾಖಲೆ ನಿರ್ಮಿಸಿದ್ದರು. ಈಗ ಅದರ ಮುಂದುವರಿದ ಭಾಗದಂತೆ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ ಕಲ್ಪನೆಯಲ್ಲಿ ‘ಕಥಾಸಂಗಮ’ ಮುಂದುವರಿದ ಭಾಗದಂತೆಮೂಡಿಬಂದಿದೆ. ಈ ತಿಂಗಳ ಅಂತ್ಯಕ್ಕೆ ಚಿತ್ರಬಿಡುಗಡೆಯಾಗಲಿದೆ.

ಚಿತ್ರದ ಟ್ರೈಲರ್‌ ಅನ್ನು ಪುಟ್ಟಣ್ಣ ಕಣಗಾಲ್‌ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಿಸಿದರು. ‘ರಿಷಬ್‌ ಶೆಟ್ಟಿ ನೇತೃತ್ವದ ತಂಡದಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಕನ್ನಡಚಿತ್ರರಂಗದಲ್ಲಿ ಬರಲಿ’ ಎಂದು ಆಶಿಸಿದರು.

ಈ ಚಿತ್ರದ ಟ್ರೈಲರ್‌ ಬಿಡುಗಡೆಯಾದಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚುಮಂದಿ ವೀಕ್ಷಿಸಿದ್ದು, 17 ಸಾವಿರ ಮಂದಿ ಇಷ್ಟಪಟ್ಟಿದ್ದಾರೆ.

ಪುಟ್ಟಣ್ಣ ಕಣಗಾಲ್‌ ಆರಂಭಿಸಿದ ಜಾನರ್‌ನಲ್ಲೇ ಸಾಗುವ ಈ ‘ಕಥಾ ಸಂಗಮ’ದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಭಾಗ, ಮೈಸೂರು ಹಾಗೂ ಮಂಗಳೂರು ಭಾಗದ ಸೊಗಡಿನ ಸಂಭಾಷಣೆ ಇರಲಿದೆ. ಈ ಚಿತ್ರ ನಿರ್ಮಾಣಕ್ಕೆ ರಿಷಬ್‌ ಅವರಜತೆಗೆ ನಿರ್ಮಾಪಕರಾದ ಎಚ್‌.ಕೆ.ಪ್ರಕಾಶ್‌, ಪ್ರದೀಪ್‌ ಎನ್‌.ಆರ್‌. ಕೈಜೋಡಿಸಿದ್ದಾರೆ. ರಿಷಬ್‌ ಪರಿಕಲ್ಪನೆಯಲ್ಲಿನಿರ್ದೇಶಕರಾದ ಕಿರಣ್‌ರಾಜ್‌ ಕೆ., ಶಶಿಕುಮಾರ್‌ ಪಿ., ಚಂದ್ರಜಿತ್‌ ಎಲ್ಲಿಯಪ್ಪ, ರಾಹುಲ್‌ ಪಿ.ಕೆ., ಜೈಶಂಕರ್‌ ಎ., ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ನಿರ್ದೇಶಿಸಿದ್ದಾರೆ. ನೊಬಿಲ್‌ ಪಾಲ್‌ ಸಂಗೀತ ನೀಡಿದ್ದಾರೆ.ತಾರಾಗಣದಲ್ಲಿ ರಿಷಬ್‌ ಶೆಟ್ಟಿ, ಹರಿಪ್ರಿಯಾ, ಕಿಶೋರ್‌ ಕುಮಾರ್‌,ರಾಜ್‌ ಬಿ. ಶೆಟ್ಟಿ, ಯಜ್ಞಾಶೆಟ್ಟಿ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಸೌಮ್ಯ, ಬಾಲಾಜಿ ಮನೋಹರ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT