ಬುಧವಾರ, ಡಿಸೆಂಬರ್ 8, 2021
25 °C

ವಿಕ್ಕಿ ಜತೆ ಮದುವೆ ಬಗ್ಗೆ ಯೋಚನೆಯೇ ಇಲ್ಲ ಎಂದ ಕತ್ರೀನಾ ಕೈಫ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

katrina kaif dh file photo

ಬೆಂಗಳೂರು: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ನಟಿ ಕತ್ರೀನಾ ಕೈಫ್ ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬೆಲ್ಲ ಸುದ್ದಿ ಆಗೊಮ್ಮೆ, ಈಗೊಮ್ಮೆ ಹರಿದಾಡುತ್ತಿರುತ್ತದೆ.

ಅದರ ಮಧ್ಯೆ, ಮದುವೆಗಾಗಿ ರಾಜಸ್ಥಾನದ ಸವಾಯ್ ಮಧೋಪುರ್‌ನಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಡಿಸೆಂಬರ್‌ನಲ್ಲಿ ವಿಕ್ಕಿ ಕೌಶಾಲ್ ಮತ್ತು ಕತ್ರೀನಾ ಕೈಫ್ ಮದುವೆ ನಡೆಯಲಿದೆ ಎಂಬ ಸುದ್ದಿಯನ್ನು ಕತ್ರೀನಾ ತಳ್ಳಿ ಹಾಕಿದ್ದಾರೆ.

ಮದುವೆ ಕುರಿತು ಹರಿದಾಡುತ್ತಿರುವ ಕಥೆಯೆಲ್ಲವೂ ಸುಳ್ಳು, ಅದರಲ್ಲಿ ನಿಜಾಂಶವಿಲ್ಲ. ಸದ್ಯಕ್ಕೆ ಮದುವೆ ಬಗ್ಗೆ ಯಾವುದೇ ಯೋಚನೆಯಿಲ್ಲ ಎಂದು ಕತ್ರೀನಾ ಹೇಳಿದ್ದಾರೆ.

ಅಲ್ಲದೆ, ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕಳೆದ ಹದಿನೈದು ವರ್ಷಗಳಿಂದ ನನಗೆ ಕೇಳುತ್ತಿದ್ದಾರೆ ಎಂದು ಕತ್ರೀನಾ ತಿಳಿಸಿದ್ದಾರೆ.

ಜತೆಗೆ ಮದುವೆ ವಸ್ತ್ರಗಳನ್ನು ಸಬ್ಯಸಾಚಿ ಮುಖರ್ಜಿ ವಿನ್ಯಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳನ್ನು ಕೂಡ ಅವರು ನಿರಾಕರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು