ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಲಿ ಬಿಕಿನಿಯಲ್ಲಿ ಕತ್ರಿನಾ: ನೆಟ್ಟಿಗರ ಎದೆಬಡಿತ ಹೆಚ್ಚಿಸಿದ ಬಾಲಿವುಡ್ ಬೆಡಗಿ

Published : 28 ಏಪ್ರಿಲ್ 2022, 7:13 IST
ಫಾಲೋ ಮಾಡಿ
Comments

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಕತ್ರಿನಾ, ಹಬ್ಬ, ಸಮಾರಂಭ, ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ನೀಲಿ ಈಜುಡುಗೆ ಧರಿಸಿ ಕ್ಯಾಮರಾಗೆ ಪೋಸ್‌ ನೀಡಿರುವ ಕತ್ರಿನಾ, ಬಿಕಿನಿಯಲ್ಲಿ ಸೂರ್ಯನಿಗೆ ಮುತ್ತಿಡುತ್ತಿರುವ ಫೋಟೊವನ್ನು ಹೃದಯದ ಎಮೋಜಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕತ್ರಿನಾ ಸೌಂದರ್ಯವನ್ನು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಬಣ್ಣಿಸಿದ್ದಾರೆ.

2021ರ ಡಿ. 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಟವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್ ಅದ್ಧೂರಿಯಾಗಿ ವಿವಾಹವಾಗಿದ್ದರು.

ಫರ್ಹಾನ್ ಅಖ್ತರ್ ಆ್ಯಕ್ಷನ್ ಕಟ್‌ ಹೇಳುತ್ತಿರುವ ‘ಜೀ ಲೇ ಝರಾ’ ಚಿತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್‌, ಸಾರಾ ಅಲಿ ಖಾನ್‌ ಅಭಿನಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT