‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್’ ಚಿತ್ರ ಇಂದಿಗೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಕಳೆದ ಡಿಸೆಂಬರ್ 21ರಂದು ಈ ಸಿನಿಮಾ ತೆರೆಕಂಡಿತ್ತು. ಮೂಲಗಳ ಪ್ರಕಾರ 100ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಅರ್ಧ ಶತಕ ಬಾರಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಗಲ್ಲಾಪೆಟ್ಟಿಗೆಯನ್ನು ದೋಚಿದ್ದ ಈ ಚಿತ್ರಕ್ಕೆ ದೇಶದಾದ್ಯಂತ ಭಾರೀ ಪ್ರಶಂಸೆ ಸಿಕ್ಕಿದೆ. ಚಂದನವನದಲ್ಲಿ ಹಲವು ಪ್ರಥಮಗಳಿಗೆ ಕೆಜಿಎಫ್ ಪಾತ್ರವಾಗಿರುವುದು ವಿಶೇಷ.ಐವತ್ತು ದಿನಗಳನ್ನು ಪೂರೈಸುವುದರ ಜೊತೆಗೆ ಅಮೆಜಾನ್ ಪ್ರೈಮ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ.

‘ಕೆಜಿಎಫ್ ಚಾಪ್ಟರ್ 2’ ಮೇಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಮಾರ್ಚ್ ಎರಡನೇ ವಾರದಿಂದ ‘ಕೆಜಿಎಫ್ 2’ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾದ ತಂತ್ರಜ್ಞರೊಂದಿಗೆ ಸಂವಾದ ಕೂಡ ಏರ್ಪಡಿಸಲಾಗಿದೆ.

‘ನನಗೆ ಬರೀ ಚಿತ್ರವಲ್ಲ. ಇಂತಹ ದಾಖಲೆಯ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಸಮರ್ಪಿಸಬೇಕೆಂಬುದು ನನ್ನ ಒಂದು ಕನಸಾಗಿತ್ತು. ಅದ್ದೂರಿ ಯಶಸ್ಸು ಕಂಡು ಚಿತ್ರ 50ನೇ ದಿನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಾನು ಇಡೀ ಚಿತ್ರತಂಡಕ್ಕೆ, ಅಭಿಮಾನಿಗಳಿಗೆ ಮತ್ತು ಸಮಸ್ತ ಸಿನಿಪ್ರಿಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.