ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲೂ ರಾಕಿ ಭಾಯ್‌ ಹವಾ!

Published 11 ಜುಲೈ 2023, 19:05 IST
Last Updated 11 ಜುಲೈ 2023, 19:05 IST
ಅಕ್ಷರ ಗಾತ್ರ

ಕಳೆದ ವರ್ಷ ಏಪ್ರಿಲ್‌ನಲ್ಲಿ ‘ಕೆ.ಜಿ.ಎಫ್‌. ಚಾಪ್ಟರ್‌ 2’ ಬಿಡುಗಡೆಯಾದ ಬಳಿಕ ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಸದ್ಯ ತಮ್ಮ 19ನೇ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದರ ಘೋಷಣೆ ಅಧಿಕೃತವಾಗಿ ಇನ್ನಷ್ಟೇ ಆಗಬೇಕಿದೆ. ಈ ಸಂದರ್ಭದಲ್ಲೇ ‘ರಾಕಿ ಭಾಯ್‌’ ಜಪಾನ್‌ಗೆ ಹೆಜ್ಜೆ ಇಡಲಿದ್ದಾರೆ. 

‘ಕೆ.ಜಿ.ಎಫ್‌’ ಸರಣಿ ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಯಶ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ‘ಜಪಾನ್‌ ಜನತೆಗೆ ನನ್ನ ನಮಸ್ಕಾರ. ನಾನು ಯಶ್‌’ ಎಂದು ಜಪಾನಿ ಭಾಷೆಯಲ್ಲೇ ಮಾತು ಆರಂಭಿಸಿ, ‘ಕೆಜಿಎಫ್‌ ಚಾಪ್ಟರ್‌ 1 ಹಾಗೂ 2 ಜಪಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕೆಜಿಎಫ್‌ ಎನ್ನುವುದು ಆ್ಯಕ್ಷನ್‌ ಪ್ಯಾಕೇಜ್‌. ಜಪಾನ್‌ ಫಾಸ್ಟನ್‌ ಯುವರ್‌ ಸೀಟ್‌ಬೆಲ್ಟ್‌’ ಎಂದಿದ್ದಾರೆ ಯಶ್‌. 

ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಕೆ.ಜಿ.ಎಫ್‌ ಚಾಪ್ಟರ್‌–2 ಯಶ್‌ ಸಿನಿಗ್ರಾಫ್‌ನಲ್ಲಿ ದೊಡ್ಡ ತಿರುವು ನೀಡಿದ ಸಿನಿಮಾ. ಈ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ₹134.5 ಕೋಟಿ ಬಾಚಿತ್ತು. ಸಿನಿಮಾ ಜಗತ್ತಿನಾದ್ಯಂತ ₹1,400 ಕೋಟಿ ಗಳಿಸಿತ್ತು. ‘ಜುಲೈ 14ಕ್ಕೆ ಜಪಾನ್‌ನಲ್ಲಿ ಕೆ.ಜಿ.ಎಫ್‌ ಸರಣಿ ಬಿಡುಗಡೆಯಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ಸಿನಿಮಾ ಬಿಡುಗಡೆ ಮಾತುಕತೆ ನಡೆಯುತ್ತಿತ್ತು. ಆರ್‌ಆರ್‌ಆರ್‌ ಸಿನಿಮಾ ವಿತರಣೆ ಮಾಡಿದವರೇ ಅಲ್ಲಿ ಕೆಜಿಎಫ್‌ ಸಿನಿಮಾ ಸರಣಿ ಬಿಡುಗಡೆ ಮಾಡುತ್ತಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್‌ನ ಚಲುವೇಗೌಡ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT