ಭಾನುವಾರ, ಜನವರಿ 17, 2021
26 °C

ಕೆಜಿಎಫ್‌ ಚಾಪ್ಟರ್‌ –2 ಕೇರಳದಲ್ಲಿಯೂ ಸ್ವಾಗತಕ್ಕೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇರಳದಲ್ಲಿಯೂ ರಾಖಿ ಬಾಯ್‌ನ ಎರಡನೇ ಅವತಾರಕ್ಕೆ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಭರ್ಜರಿಯಾಗಿ ಆರಂಭಗೊಂಡಿದೆ.

ಮಲೆಯಾಳಂನಲ್ಲಿ ಪ್ರಥ್ವಿರಾಜ್‌ ಸುಕುಮಾರನ್‌ ಅವರು ತಮ್ಮ ಪ್ರಥ್ವಿರಾಜ್‌ ಪ್ರೊಡಕ್ಷನ್ಸ್‌ ಸಂಸ್ಥೆಯ ಮೂಲಕ ಕೇರಳದಲ್ಲಿ ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಲೆಯಾಳಂನಲ್ಲಿ ಕೆಜಿಎಫ್‌ ರಾಖಿ ಬಾಯ್‌ ತೆರೆದುಕೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಕುಮಾರನ್‌ ಅವರು ಇತ್ತೀಚೆಗಷ್ಟೇ ಮಲೆಯಾಳಂನ ತನಿಖೆ– ಥ್ರಿಲ್ಲರ್‌ ಕಥಾ ಹಂದರದ ಚಿತ್ರ ‘ಕೋಲ್ಡ್‌ ಕೇಸ್‌’ನ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ.

ಚಿತ್ರದ ಎಲ್ಲ ಕಾರ್ಯಗಳು ಬಹುತೇಕ ಮುಕ್ತಾಯಗೊಂಡಿದೆ. ಜ. 8ರಂದು ಯೂನಿವರ್ಸಲ್‌ ಟೀಸರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಬಿಡುಗಡೆಯ ದಿನಾಂಕ ಮಾತ್ರ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು