ಭಾರತೀಯ ಸಿನಿ ಇತಿಹಾಸದಲ್ಲೇ ದಾಖಲೆ ಬರೆದ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರದ ಮುಂದುವರಿದ ಭಾಗ ‘ಕೆಜಿಎಫ್– ಚಾಪ್ಟರ್ 2’ನ ಟೀಸರ್ ಅನ್ನು ಜನವರಿ 8, 2021ಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

‘ಸಾಮ್ರಾಜ್ಯದತ್ತ ಒಂದು ನೋಟ. ಇದಕ್ಕಾಗಿ ಒಂದು ವರ್ಷ ತಡವಾಗಿರಬಹುದು. ಆದರೆ ನಾವು ಇನ್ನಷ್ಟು ಸೃದಢರಾಗಿ, ಬಲಿಶಾಲಿ ಬಂದಿದ್ದೇವೆ’ ಎಂದು ಟ್ವಿಟ್ಟರ್ ಪುಟದಲ್ಲಿ ಘೋಷಣೆ ಮಾಡಿದ್ದಾರೆ ಪ್ರಶಾಂತ್.

ಕೋವಿಡ್–19 ಕಾರಣದಿಂದ ಶೂಟಿಂಗ್ ಅವಧಿಯನ್ನು ಕೆಲದಿನಗಳ ಕಾಲ ಮುಂದಕ್ಕೆ ಹಾಕಿದ್ದ ಪ್ರಶಾಂತ್ ನಿನ್ನೆ ಹೈದರಾಬಾದ್ನಲ್ಲಿ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

‘ನನ್ನ ಕೈಯಲ್ಲಿ ಒಂದು ಅತ್ಯುತ್ತಮ ತಂಡ ಇರುವಾಗ ಹುಂಬತನ, ಬಳಲಿಕೆ ಹಾಗೂ ಚಿತ್ರೀಕರಣ ಪೂರ್ಣಗೊಳಿಸುವುದು ಯಾವುದೂ ಕಷ್ಟ ಎನ್ನಿಸಲಿಲ್ಲ. ಸಂಜಯ್ ದತ್ ನಿಜ ಜೀವನದಲ್ಲೂ ಹೋರಾಟಗಾರ. ಯಶ್ ಮೊದಲಿನಂತೆ ಕೆಲಸದಲ್ಲಿ ಸದಾ ಹುಮ್ಮಸ್ಸಿನ ವ್ಯಕ್ತಿ. ಕೆಜಿಎಫ್–ಚಾಪ್ಟರ್ 2 ಅನ್ನು ಜಗತ್ತಿಗೆ ತೋರಿಸಲು ಉತ್ಸುಕನಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಕೆಜಿಎಫ್–ಚಾಪ್ಟರ್ 2ಕ್ಕಾಗಿ ಪ್ರಶಾಂತ್ ತಂಡಕ್ಕೆ ಹೊಸತಾಗಿ ಸೇರ್ಪಡೆಯಾದ ಸಂಜಯ್ದತ್ ಅಧೀರನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಪ್ರಕಾಶ್ ರಾಜ್ ಹಾಗೂ ರವೀನಾ ಟಂಡನ್ ಕೂಡ ತಂಡಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.