ಶುಕ್ರವಾರ, ನವೆಂಬರ್ 22, 2019
20 °C

ಕಾಲಿವುಡ್‌ಗೆ ಕಾಲಿಡಲಿದ್ದಾರೆ ಕೆಜಿಎಫ್‌ ಬೆಡಗಿ ಶ್ರೀನಿಧಿ

Published:
Updated:
prajavani

ಕೆಜಿಎಫ್‌ ಚಿತ್ರದಲ್ಲಿ ನಟ ಯಶ್‌ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಶ್ರೀನಿಧಿ ಶೆಟ್ಟಿ ಸದ್ಯದಲ್ಲೇ ತಮಿಳಿನಲ್ಲಿ ನಟ ವಿಕ್ರಮ್‌ ನಾಯಕ ನಟನಾಗಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಈ ಚಿತ್ರದ ಬಗ್ಗೆ ಈಗಾಗಲೇ ನಟಿ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೆಳಿಬರುತ್ತಿವೆ.

 ಇದು ವಿಕ್ರಮ್‌ ಅಭಿನಯದ 58ನೇ ಚಿತ್ರ. ಈ ಚಿತ್ರವನ್ನು ಅಜಯ್‌ ಜ್ಞಾನಮುತ್ತು ಅವರು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾನ್‌ ಪೊಲೀಸ್‌ ಪಾತ್ರದಲ್ಲಿ ನಟಿಸಲಿದ್ದಾರೆ. ಈಗ ಕೆಜಿಎಫ್‌ ಖ್ಯಾತಿಯ ಶ್ರೀನಿಧಿ ಶೆಟ್ಟಿ ಅವರು ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಈ ಸುದ್ದಿಯನ್ನು ಶ್ರೀನಿಧಿ ಶೆಟ್ಟಿ ಸ್ವತಃ ಟ್ವೀಟ್‌ ಮಾಡುವ ಸ್ಪಷ್ಟಪಡಿಸಿದ್ದಾರೆ.  ವಿಕ್ರಮ್‌ ಅವರ 58ನೇ ಚಿತ್ರದಲ್ಲಿ ಅಭಿನಯಿಸಲು ಖುಷಿಯಾಗುತ್ತಿದೆ. ತಂಡದ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ.

 ಈ ಚಿತ್ರಕ್ಕೆ ಇನ್ನೂ ಟೈಟಲ್‌ ಅಂತಿಮವಾಗಿಲ್ಲ. ಸದ್ಯದಲ್ಲೇ ಚಿತ್ರೀಕರಣ ಆರಂ

ಪ್ರತಿಕ್ರಿಯಿಸಿ (+)