ಶನಿವಾರ, ಜನವರಿ 25, 2020
22 °C

ಫೇಸ್‌ಬುಕ್‌ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿರುವ ಕಿಚ್ಚ ಸುದೀಪ್ ಇದೀಗ ಫೇಸ್‌ಬುಕ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳ ಟ್ವೀಟ್ ಹಾಗೂ ಪೋಸ್ಟರ್​​ಗಳಿಗೆ ಪ್ರತಿಕ್ರಿಯಿಸುತ್ತ ಅವರೊಂದಿಗೆ ಸಂಪರ್ಕದಲ್ಲಿರುವ ಕಿಚ್ಚ ಇದೀಗ ಫೇಸ್‌ಬುಕ್ ಮೂಲಕವೂ ಇನ್ನಷ್ಟು ಹತ್ತಿರವಾಗಲಿದ್ದಾರೆ. 

ಸುದೀಪ್​ ಅವರು ಈಗಾಗಲೇ ಟ್ವಿಟರ್ ಖಾತೆ ಹೊಂದಿದ್ದು, ಟ್ವಿಟರ್​ನಲ್ಲಿ 2.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.  ಇನ್​ಸ್ಟಾಗ್ರಾಂನಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು, ಸಾಮಾಜಿಕ ಜಾಲತಾಣಗಳ ಮೂಲಕವೇ ಸಿನಿಮಾಗಳ ಪ್ರಚಾರ ಕಾರ್ಯ ಕೂಡ ಮಾಡುತ್ತಾರೆ.

ಈ ಮಧ್ಯೆ ಟ್ವೀಟ್ ಮಾಡಿರುವ ಸುದೀಪ್, ಇದು ನನ್ನ ಅಧಿಕೃತ ಫೇಸ್‌ಬುಕ್ ಖಾತೆಯ ಲಿಂಕ್ ಎಂದು ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. ಆ ಪೇಜ್‌ಗೆ I am K ಎಂದು ಹೆಸರಿಟ್ಟಿದ್ದು, ತಮ್ಮ ಪ್ರೊಫೈಲ್ ಫೋಟೊ ಹಾಕಿಕೊಂಡಿದ್ದಾರೆ. 

ಇದು ನನ್ನ ಅಧಿಕೃತ ಫೇಸ್‌ಬುಕ್ ಪೇಜ್ ಎಂದು ಬರೆದುಕೊಂಡಿರುವ ಸುದೀಪ್ ಪೋಸ್ಟ್‌ಗೆ ಸುಮಾರು 1800ಕ್ಕೂ ಅಧಿಕ ಜನ ಲೈಕ್ ಮಾಡಿದ್ದು, 121 ಜನ ಶೇರ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. 

ಇದನ್ನೂ ಓದಿ:  'ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ': ಸುದೀಪ್ ಟ್ವೀಟ್‌ಗೆ ಮಹಿಳೆಯರ ಆಕ್ರೋಶ

 
 
 
 

 
 
 
 
 
 
 
 
 

#Dabangg3 ........ few days to go.

A post shared by kicchasudeep (@kichchasudeepa) on

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು