ಕೊರೊನಾ ಲಾಕ್ಡೌನ್ನ ಸಂಕಷ್ಟದ ಕಾಲದಲ್ಲಿ ದೇಶದ ನಾನಾ ಭಾಗದ ವಲಸಿಗರಿಗೆ ಬಸ್, ವಿಮಾನ ವ್ಯವಸ್ಥೆ ಮಾಡುವ ಮೂಲಕತಮ್ಮ ಊರು ತಲುಪಲು ನೆರವಾದವರು ನಟ ಸೋನು ಸೂದ್. ಈಚೆಗೆ ಮುಂಬೈನಿಂದ, ಉತ್ತರಾಖಂಡದ ಡೆಹ್ರಾಡೂನ್ಗೆ 173 ವಲಸೆ ಕಾರ್ಮಿಕರನ್ನು ಕಳುಹಿಸಲು ಸೂದ್ ಏರ್ಏಷ್ಯಾ ವಿಮಾನ ವ್ಯವಸ್ಥೆ ಮಾಡಿದ್ದರು. ಅವರ ಈ ಎಲ್ಲಾ ಸಾಮಾಜಿಕ ಕೆಲಸಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೇ ಅನೇಕ ಜನರು ಮೀಮ್ಸ್, ಹಾಡುಗಳ ಮೂಲಕ ಸೋನು ಅವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

ಇಬ್ಬರು ಪುಟ್ಟಮಕ್ಕಳು ಸೋನುಸೂದ್ಗೆ ಧನ್ಯವಾದ ಹೇಳಿರುವ ವಿಡಿಯೊ ಈಗ ವೈರಲ್ ಆಗಿದೆ. ಶಿಕ್ಲಾ ಮಿಶ್ರಾ ಎಂಬವರು ಟ್ವಿಟ್ಟರ್ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಇಬ್ಬರು ಪುಟಾಣಿ ಬಾಲಕಿಯರು ಆ್ಯಂಕರ್ಗಳಾಗಿ ಕಾಣಿಸಿಕೊಂಡಿದ್ದು, ಕೊರೊನಾ ಟಿವಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

47 ನಿಮಿಷದ ವಿಡಿಯೊದಲ್ಲಿ ಬಾಲಕಿಯರು ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಸಂಕಷ್ಟವನ್ನು ತೆರೆದಿಟ್ಟಿದ್ದು, ಬಳಿಕ ಅವರನ್ನು ಮನೆ ತಲುಪಿಸಿದ ಸೋನು ಸೂದ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೊಗೆ ಅನೇಕ ಮೆಚ್ಚುಗೆ, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸ್ವತಃ ಸೋನು ಸೂದ್ ಅವರೇ ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.‘ಎಂದಿಗೂ ಕ್ಯೂಟೆಸ್ಟ್ ನಿರೂಪಕಿಯರು. ನಿಮ್ಮ ಚಾನೆಲ್ನ ಟಿಆರ್ಪಿ ಯಾರೂ ಮುರಿಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.