ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾ ʻಕೊತ್ತಲವಾಡಿʼ. ಆಗಸ್ಟ್ 1ರಂದು ಈ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು. ಆದ್ರೆ, ಸಿನಿಮಾ ರಿಲೀಸ್ ಆಗಿ ತಿಂಗಳುಗಳು ಕಳೆದರು ನಮಗೆ ಬರಬೇಕಾಗಿದ್ದ ಸಂಭಾವನೆ ಬಂದಿಲ್ಲ ಎಂದು ನಟ ಪೃಥ್ವಿ ಅಂಬಾರ್ ಜೊತೆಗೆ ನಟಿಸಿದ್ದ ಮಹೇಶ್ ಗುರು ಅಸಮಾಧಾನ ಹೊರ ಹಾಕಿದ್ದಾರೆ.

ಶ್ರೀರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಕೊತ್ತಲವಾಡಿ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆದರು ನನಗೆ ಬರಬೇಕಾಗಿದ್ದ ದುಡ್ಡು ಕೊಟ್ಟಿಲ್ಲ. ದಯವಿಟ್ಟು ಈ ವಿಡಿಯೊ ನಮ್ಮ ಪುಷ್ಪ ಮೇಡಂ ಅವರಿಗೆ ತಲುಪಲಿ ಅನ್ನೋದು ನನ್ನ ಉದ್ದೇಶ ಎಂದು ತಮಗಾದ ಅನ್ಯಾಯದ ಕುರಿತು ನಟ ಮಹೇಶ್ ಗುರು ಮಾತನಾಡಿದ್ದಾರೆ. ಆದ್ರೆ, ತಾವು ಮಾತಾಡಿರೋ ವಿಡಿಯೊ ಎಲ್ಲೆಡೆ ಹರಿದಾಡಿದ ನಂತರ ಮಾಧ್ಯಮಗಳು ಅದನ್ನು ಸುದ್ದಿ ಮಾಡಿದವು. ನಂತರ ನಟ ಮಹೇಶ್ ಗುರು ಫೇಸ್ಬುಕ್ ಖಾತೆಯಿಂದ ತೆಗೆದು ಹಾಕಿದ್ದಾರೆ.
.ನಿರ್ಮಾಪಕಿ ಪುಷ್ಪ ಹೊಸ ಪ್ರಾಜೆಕ್ಟ್ನಲ್ಲಿ ನಟ ಶರಣ್ ನಾಯಕ.ಒಟಿಟಿಗೆ ಬಂತು ‘ಕೊತ್ತಲವಾಡಿ’ ಸಿನಿಮಾ.
ಮಹೇಶ್ ಗುರು ಹೇಳಿದ್ದೇನು?

‘ನಮಸ್ತೆ ನನ್ನ ಹೆಸರು ಮಹೇಶ್ ಗುರು. ನಾನೊಬ್ಬ ರಂಗಭೂಮಿ ಕಲಾವಿದ ಮತ್ತು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದೇನೆ. ವಿಷ್ಯ ಏನಪ್ಪಾ ಅಂತಂದರೆ, ಆಗಸ್ಟ್ 1ರಂದು ʻಕೊತ್ತಲವಾಡಿʼ ಎಂಬ ಸಿನಿಮಾ ರಿಲೀಸ್ ಆಯ್ತು. ಅದು ನಮ್ಮ ʻಪಿಎʼ ಪ್ರೊಡಕ್ಷನ್ನ ಮೊದಲ ನಿರ್ಮಾಣ. ಅದರ ಮಾಲೀಕರು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು. ಈ ಸಿನಿಮಾದಲ್ಲಿ ನಿರ್ದೇಶಕರಾಗಿ ಶ್ರೀ ರಾಜ್ ಮತ್ತು ಹೀರೋ ನಮ್ಮ ಪೃಥ್ವಿ ಅಂಬಾರ್ ಸರ್ ಕಾಣಿಸಿಕೊಂಡಿದ್ದಾರೆ. ನನ್ನ ನಟನೆ ಪೃಥ್ವಿ ಅಂಬಾರ್ ಅವರ ಸಹ ನಟನಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ನಾನು ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ’ ಎಂದಿದ್ದಾರೆ.

ಮತ್ತೆ ಮಾತನ್ನು ಮುಂದುವರೆಸಿದ ಅವರು, ‘ನಾನು ಈ ಸಿನಿಮಾಗೆ ಸೆಲೆಕ್ಟ್ ಆಗಿದ್ದು ನಿರ್ದೇಶಕರ ಕಡೆಯಿಂದ, ಅಂದರೆ ನೇರವಾಗಿ. ಪ್ರೊಡಕ್ಷನ್ ಅಥವಾ ಮ್ಯಾನೇಜರ್ ಕಡೆಯಿಂದಾಗಲಿ ನಾನು ಬಂದಿದ್ದಲ್ಲ. ತಿಂಗಳಿಗೆ ಇಷ್ಟು, ಡೈಲಿ ಕನ್ವಿನಿಯೆನ್ಸ್ ಇಷ್ಟು ಇರುತ್ತದೆ ಅಂತ ನಮಗೆ ಒಂದು ಪ್ಯಾಕೇಜ್ ಅನ್ನು ನಿರ್ದೇಶಕರು ಮಾತನಾಡಿದ್ದರು. ನಾವು ಕೂಡ ಖುಷಿ ಖುಷಿಯಾಗಿ ಒಪ್ಪಿಕೊಂಡಿದ್ದೆವು. ಸಿನಿಮಾ ಶುರು ಆಗೋದಕ್ಕೂ ಮೊದಲೇ ಒಂದು ಅಡ್ವಾನ್ಸ್ ಮಾಡಿಸುತ್ತೇನೆ ಅಂತ ಹೇಳಿದ್ದರು. ಸಿನಿಮಾ ಮುಹೂರ್ತ ಆಯ್ತು, ಮುಹೂರ್ತದಲ್ಲಿ ಕೇಳಿದಕ್ಕೆ, ಪ್ರೊಡಕ್ಷನ್ನಿಂದ ಇನ್ನೂ ಅಮೌಂಟ್ ಬಂದಿಲ್ಲ, ಬಂದ ತಕ್ಷಣ ಮಾಡಿ ಕೊಡುತ್ತೇನೆ ಅಂತ ಹೇಳಿದ್ದರು. ಸಿನಿಮಾ ಶುರು ಆಯ್ತು. ಪೂರ್ತಿ ಸಿನಿಮಾ ಮುಗಿದಿತ್ತು. ಹಾಡು ಮುಗೀತು ಫೈಟ್ ಕೂಡ ಮುಗೀತು. ಎಷ್ಟು ಬಾರಿ ಕೇಳಿದ್ದರು ಪ್ರೊಡಕ್ಷನ್ನಿಂದ ಇನ್ನೂ ಅಮೌಂಟ್ ಬಂದಿಲ್ಲ, ಅಮೌಂಟ್ ಬಂದಿಲ್ಲ ಅಂತ ಹೇಳುತ್ತಲೇ ಬಂದರು.

ಕೊನೆಗೆ ಡಬ್ಬಿಂಗ್ ಹಂತಕ್ಕೆ ಬಂತು, ಡಬ್ಬಿಂಗ್ಗೆ ಕರೆದರು. ಡಬ್ಬಿಂಗ್ ಮುಗಿಸಿದ ನಂತರ ಪೇಮೆಂಟ್ ಕ್ಲಿಯರ್ ಮಾಡಿ ಅಂತ ಕೇಳಿದಕ್ಕೆ, ಇನ್ನೂ ಪ್ರೊಡಕ್ಷನ್ನಿಂದ ದುಡ್ಡು ಬಂದಿಲ್ಲ. ಬಂದ ತಕ್ಷಣ ಮಾಡಿ ಕೊಡುತ್ತೇನೆ ಅಂತ ನಿರ್ದೇಶಕರು ಹೇಳಿದ್ದರು. ನಂತರ ನಮ್ಮ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಕಾಲ್ ಮಾಡಿದ್ರೆ ಕಟ್ ಮಾಡುತ್ತಿದ್ದರು. ಈ ನಡುವೆ ಟೀಸರ್, ಟ್ರೈಲರ್ ಮತ್ತು ಅದ್ಧೂರಿಯಾದಂತಹ ಪ್ರೆಸ್ಮೀಟ್ಗಳನ್ನ ಮಾಡಿದ್ದರು. ಅದಕ್ಕೆ ನಮ್ಮನ್ನ ಇನ್ವೈಟ್ ಕೂಡ ಮಾಡಲಿಲ್ಲ. ಸಿನಿಮಾ ಕೂಡ ಭರ್ಜರಿಯಾಗಿ ಬಿಡುಗಡೆ ಆಯ್ತು. ಥಿಯೇಟರ್ನಿಂದ ಒಟಿಟಿಗೆ ಸಿನಿಮಾ ಬಂದಿದೆ. ಈಗಲೂ ಕೂಡ ನಮಗೆ ಪೇಮೆಂಟ್ ಬರಲಿಲ್ಲ. ಮೂರು ತಿಂಗಳಿಗೂ ಹೆಚ್ಚು ಕಾಲ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ನಮಗೆ ಮೋಸ ಆಗಿದೆ. ಇದನ್ನ ಯಾರ ಹತ್ತಿರ ಹೇಳಿಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಪ್ರೊಡ್ಯೂಸರ್ನ ಮೀಟ್ ಮಾಡೋಣ ಎಂದರೆ ಅವರ ಹತ್ತಿರ ಹೋಗೋದು ಅಷ್ಟು ಸುಲಭ ಆಗಿರಲಿಲ್ಲ. ಅವರ ಕಾಂಟ್ಯಾಕ್ಟ್ ಇರಲಿಲ್ಲ, ಅವರನ್ನ ಹತ್ತಿರದಿಂದ ಭೇಟಿ ಆಗುವ ಅವಕಾಶ ಕೂಡ ಸಿಗಲಿಲ್ಲ. ಈಗ ನಡೆದಿರುವ ಮೋಸವನ್ನ ಅವರಿಗೆ ತಿಳಿಸಿ, ದಯವಿಟ್ಟು ಈ ವಿಡಿಯೋ ನಮ್ಮ ಪುಷ್ಪ ಮೇಡಂ ಅವರಿಗೆ ತಲುಪಲಿ ಅನ್ನೋದು ನನ್ನ ಉದ್ದೇಶ ಎಂದು ಮಹೇಶ್ ಗುರು ಹೇಳಿಕೊಂಡಿದ್ದಾರೆ.

ಇನ್ನು, ಮಹೇಶ್ ಗುರು ಅವರ ಆರೋಪ ಕುರಿತಂತೆ ನಿರ್ಮಾಪಕರಾಗಲೀ ಅಥವಾ ನಿರ್ದೇಶಕರಾಗಲೀ ಯಾವುದೇ ಹೇಳಿಕೆಯನ್ನು ಈವರೆಗೂ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.