ಮಂಗಳವಾರ, ಸೆಪ್ಟೆಂಬರ್ 28, 2021
22 °C

ಆಶ್ಲೀಲ ಚಿತ್ರದ ವಿಚಾರದಲ್ಲಿ ದಿಕ್ಕು ತಪ್ಪಿಸಿದ್ದ ಕುಂದ್ರಾ: ನಟಿ ಶೆರ್ಲಿನ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ನನ್ನ ದಿಕ್ಕುತಪ್ಪಿಸಿದ್ದರು ಎಂದು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ.

‘ಅವರ ಜೊತೆಗೆ ನಾನೂ ಸೇರಿಕೊಳ್ಳಬೇಕು ಎಂಬುದು ಕುಂದ್ರಾ ಬಯಕೆಯಾಗಿತ್ತು. ಅಲ್ಲದೆ, ‘ಶೆರ್ಲಿನ್‌ ಚೋಪ್ರಾ’ ಎಂಬ ಹೆಸರಿನಲ್ಲಿ ಆ್ಯಪ್‌ ತರುವುದಾಗಿ ಅವರು ಹೇಳಿದ್ದರು ಎಂದು ಚೋಪ್ರಾ ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರು ಸಿಲುಕಿಕೊಂಡಿರುವ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಚೋಪ್ರಾ ಕಳೆದ ಶುಕ್ರವಾರ ಮುಂಬೈ ಪೊಲೀಸರ ಎದುರು ಹಾಜರಾಗಿದ್ದರು.

‘ಆ್ಯಪ್‌ನಲ್ಲಿ ಗ್ಲ್ಯಾಮರ್, ಹೈ ಫ್ಯಾಷನ್, ಫಿಟ್‌ನೆಸ್ ಇತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಹಂಚಿಕೊಳ್ಳಬೇಕು ಎಂದು ಕುಂದ್ರಾ ಹೇಳಿದ್ದರು. ವಿಡಿಯೊ ಪರಿಕಲ್ಪನೆಯು ಆರಂಭದಲ್ಲಿ ‘ಗ್ಲ್ಯಾಮರ್’ ಮಾತ್ರ ಆಗಿತ್ತು. ನಂತರದಲ್ಲಿ ಅರೆ-ಬೆತ್ತಲೆ, ಬೆತ್ತಲೆ ಚಿತ್ರದ ಪರಿಕಲ್ಪನೆಯಾಗಿ ರೂಪ ಪಡೆದುಕೊಳ್ಳಲಾರಂಭಿಸಿತ್ತು,‘ ಎಂದು ಅವರು ತಿಳಿಸಿದ್ದಾರೆ.

‘ಚಿತ್ರೀಕರಣದ ಸಮಯದಲ್ಲಿ ಕುಂದ್ರಾ ನನ್ನನ್ನು ಉತ್ತೇಜಿಸುತ್ತಿದ್ದರು. ನಾನು ಅದ್ಭುತವಾಗಿದ್ದೇನೆ ಎಂದು ಅವರು ಹೇಳುತ್ತಿದ್ದರು. ಶಿಲ್ಪಾ ನಿಮ್ಮ ಫೋಟೋಗಳು ಮತ್ತು ವಿಡಿಯೊಗಳನ್ನು ನೋಡಿ, ನಿಮ್ಮ ಕೆಲಸವನ್ನು ಶ್ಲಾಘಿಸಿದ್ದಾರೆ ಎನ್ನುತ್ತಿದ್ದರು,‘ ಎಂದು ಚೋಪ್ರಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು