ಭಾನುವಾರ, ಸೆಪ್ಟೆಂಬರ್ 15, 2019
30 °C

ನೂರು ಕೋಟಿ ಗಳಿಕೆಯತ್ತ ಕುರುಕ್ಷೇತ್ರ

Published:
Updated:
Prajavani

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದ 14 ದಿನಗಳಲ್ಲಿ ₹97 ಕೋಟಿ ಗಳಿಸಿದ್ದು, ನೂರು ಕೋಟಿ ಗಳಿಕೆಯ ಕ್ಲಬ್‌ ಸೇರುವತ್ತ ದಾಪುಗಾಲಿಟ್ಟಿದೆ.

ಬಹುತಾರಾಗಣವಿರುವ ಈ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಬಂಡವಾಳ ಹೂಡಿದ್ದಾರೆ. ದರ್ಶನ್‌ ನಟನೆಯ 50ನೇ ಚಿತ್ರ ಇದು. 

ಇದರಲ್ಲಿ ದರ್ಶನ್‌ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರ ಆವರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳ ಪರಂಪರೆ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಈ ಸಿನಿಮಾ ಹೊಸ ಸಂಚಲನ ಸೃಷ್ಟಿಸಿದೆ. 3ಡಿ ರೂಪದಲ್ಲಿ ತೆರೆಕಂಡಿರುವ ಈ ಚಿತ್ರಕ್ಕೆ ಜನರಿಂದಲೂ ಉತ್ತಮ ‍ಪ್ರತಿಕ್ರಿಯೆ ಸಿಕ್ಕಿದೆ.

Post Comments (+)