ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಯರ್‌ ಸ್ಟೂಡೆಂಟ್ಸ್‌’ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ

Published 14 ಏಪ್ರಿಲ್ 2024, 10:06 IST
Last Updated 14 ಏಪ್ರಿಲ್ 2024, 10:06 IST
ಅಕ್ಷರ ಗಾತ್ರ

ನವದೆಹಲಿ: ‘ಡಿಯರ್‌ ಸ್ಟೂಡೆಂಟ್ಸ್‌’ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಕಾಣಿಸಿಕೊಳ್ಳಲಿದ್ದಾರೆಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ನಟ ಹಾಗೂ ನಿರ್ಮಾಪಕ ನಿವಿನ್‌ ಪೌಲಿ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

2019ರಲ್ಲಿ ಬಿಡುಗಡೆಗೊಂಡ ಲವ್, ಆ್ಯಕ್ಷನ್‌ ಡ್ರಾಮಾ ಸಿನಿಮಾದ ಬಳಿಕ ಇದೀಗ ಎರಡನೇ ಬಾರಿಗೆ ನಟ ನಿವಿನ್ ಪೌಲಿ ಹಾಗೂ ನಯನತಾರಾ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

‘ಡಿಯರ್ ಸ್ಟೂಡೆಂಟ್ಸ್’ ಚಿತ್ರಕ್ಕೆ ಸಂದೀಪ್ ಕುಮಾರ್ ಹಾಗೂ ಜಾರ್ಜ್ ಫಿಲಿಪ್ ರಾಯ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ನಿವಿನ್ ಪೌಲಿ ಅವರು ಈ ಚಿತ್ರವನ್ನೂ ನಿರ್ಮಿಸುತ್ತಿದ್ದು, ಪಾಲಿ ಪಿಕ್ಚರ್ಸ್ ಮತ್ತು ಕರ್ಮ ಮೀಡಿಯಾ ಬ್ಯಾನರ್‌ಗಳು ಸಹ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿವೆ.

ಈ ಚಿತ್ರ 2024ರ ಡಿಸೆಂಬರ್‌ 22ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT