ಸೋಮವಾರ, ಮಾರ್ಚ್ 27, 2023
30 °C

ವಿಚ್ಛೇದನ ಬಳಿಕ ನಾಗ ಚೈತನ್ಯ ಜತೆ ಗಗನದಲ್ಲಿ ಕಂಡ ಸಖಿ ಯಾರು? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್​ ನಟ ನಾಗ ಚೈತನ್ಯ ಅವರು ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರವಾದ ಬಳಿಕ ತಮ್ಮ ಖಾಸಗಿ ವಿಮಾನದಲ್ಲಿ ನಟಿ, ನಿರೂಪಕಿ ಲಹರಿ ಶರಿ ಕಾಣಿಸಿಕೊಂಡಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ಲಹರಿ ಶರಿ ಜೊತೆ ನಾಗ ಚೈತನ್ಯ ಕಾಣಿಸಿಕೊಂಡಿರುವ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. 

ನಾಗ ಚೈತನ್ಯ ಬಂಗಾರ್ರಾಜು ಸಿನಿಮಾದಲ್ಲಿ ಅಭಿನಯಿಸಿದ್ದು ಈ ಚಿತ್ರದ ಪ್ರಚಾರಕ್ಕಾಗಿ ಅವರು ತಮ್ಮ ಖಾಸಗಿ ವಿಮಾನದಲ್ಲಿ ಸುತ್ತಾಡುತ್ತಿದ್ದಾರೆ. ಇದೇ ವೇಳೆ ಅವರು ತಮ್ಮ ಜೊತೆಗೆ ಹಲವರನ್ನು ಕರೆದುಕೊಂಡು ಹೋಗುತ್ತಾರೆ. ಅವರ ಜತೆಯಲ್ಲಿಇರುವ ಅವಕಾಶ ಲಹರಿ ಶರಿಗೂ ಬಂದಿದ್ದು ದಿನ ಪೂರ್ತಿ ನಾಗ ಚೈತನ್ಯ ಜತೆಯಲ್ಲಿ ಕಳೆದಿದ್ದಾರೆ. ಆ ವಿಮಾನದಲ್ಲಿ ನಟ ನಾಗಾರ್ಜುನ ಕೂಡ ಇದ್ದರು.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಲಹರಿ ಶರಿ, ನಾಗ ಚೈತನ್ಯ ಸರ್‌ ಹಾಗೂ ನಾಗಾರ್ಜುನ ಸರ್‌ ಅವರ ಜೊತೆ ಕಾಲ ಕಳೆಯಬೇಕು ಎಂಬುದು ನನ್ನ ಕನಸಾಗಿತ್ತು. ಅದು ನನಸಾಗಿದೆ ಎಂದಿದ್ದಾರೆ. ಅವರ ಜೊತೆ ಇರುವ ಸೆಲ್ಫಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.  

ಬಂಗಾರ್ರಾಜು ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು