‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್ ನಟನೆಯ ಸಿನಿಮಾ ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಬಣ್ಣಹಚ್ಚಿದ್ದು ಅವರ ಪಾತ್ರದ ಲುಕ್ ಬಿಡುಗಡೆಯಾಗಿದೆ.

ಹಿಂದೆಂದೂ ಮಾಡಿರದಂಥ ಒಂದು ಭಿನ್ನವಾದ ಪಾತ್ರದಲ್ಲಿ ರಚಿತಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. 18 ವರ್ಷ ಮಗಳಿರುವ ತಾಯಿಯಾಗಿ ಅವರಿಲ್ಲಿ ಬಣ್ಣಹಚ್ಚಿದ್ದು, ಚಿತ್ರತಂಡ ಇವರಿಗೆ ‘ಲೇಡಿ ಸೂಪರ್ಸ್ಟಾರ್’ ಎಂಬ ಬಿರುದು ನೀಡಿ ಜನ್ಮದಿನದ ಶುಭಾಶಯ ಕೋರಿದೆ. ಎಲೆಅಡಿಕೆ ಜಗಿಯುತ್ತಾ, ಕೈಯಲ್ಲೊಂದು ಕತ್ತಿ ಹಿಡಿದು ರಚಿತಾ ಪ್ರವೇಶಿಸುವ ಟೀಸರ್ ಕೂಡಾ ಬಿಡುಗಡೆಗೊಂಡಿದೆ.

ಸಾರಥಿ ಫಿಲಂಸ್ ಬ್ಯಾನರ್ನಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಚಿತ್ರದಲ್ಲಿ ವಿಜಯ್ ಅವರ ಮಗಳಾದ ರಿತಿನ್ಯ ನಟಿಸಿದ್ದು, ಸ್ವತಂತ್ರ ಭೂಮಿಯ ಕಲ್ಪನೆ, ಶಿಕ್ಷಣ, ಕೂಲಿಗೆ ತಕ್ಕ ಕಾಸು ಎಂಬ ವಿಷಯಗಳ ಕುರಿತು ಚಿತ್ರ ಕಥಾಹಂದರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.