ಬುಧವಾರ, ಅಕ್ಟೋಬರ್ 20, 2021
24 °C

ಅರ್ಧ ಶತಕದತ್ತ ಯೋಗಿ ‘ಲಂಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರ‌‌ ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ.

‘ಚಿತ್ರ ಬಿಡುಗಡೆಯ ಸಮಯದಲ್ಲಿ ಕೆಲವರು ಇದು ಒಂದು ವಾರದ ಸಿನಿಮಾ ಎಂದಿದ್ದರು. ಅವರಿಗೆ ಉತ್ತರವಾಗಿ ‘ಲಂಕೆ’ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಐವತ್ತರ ಸಂಭ್ರಮವೂ ಹತ್ತಿರದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ಬಂದಿದೆ. ಲಾಭ ಬರುವ ನಿರೀಕ್ಷೆ ಇದೆ. ತೆಲುಗಿನ ಖ್ಯಾತನಾಮರೊಬ್ಬರು ‘ಲಂಕೆ’ಯ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ. ನನ್ನ ಹಾಗೂ ಯೋಗಿ ಕಾಂಬಿನೇಶನ್ ನಲ್ಲಿ ನೂತನ ಚಿತ್ರ ಸಹ ಸದ್ಯದಲ್ಲೇ ಆರಂಭವಾಗಲಿದೆ’ ಎಂದಿದ್ದಾರೆ ನಿರ್ದೇಶಕ ರಾಮಪ್ರಸಾದ್.

‘ಚಿತ್ರಮಂದಿರಗಳಲ್ಲಿ ಶೇ 50 ಆಸನ  ಭರ್ತಿಗೆ ಅವಕಾಶವಿದ್ದಾಗ ನಮ್ಮ ಚಿತ್ರ ಬಿಡುಗಡೆಯಾಯಿತು. ಯಾರು ಏನೇ ಹೇಳಿದರೂ ನಮ್ಮ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ಚಿತ್ರ ಬಿಡುಗಡೆ ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು. ಸುಚೀಂದ್ರ ಪ್ರಸಾದ್ ಅವರಂತಹ ನಟರೊಂದಿಗೆ ನಟಿಸಿದ್ದು ಸಂತಸ ತಂದಿದೆ.. ನಮ್ಮ ಚಿತ್ರ ಇನ್ನೂ ಹೆಚ್ಚು ದಿನಗಳ ಕಾಲ ಓಡುವ ಭರವಸೆ ಇದೆ’ ಎಂದರು ನಾಯಕ ಯೋಗಿ.

‘ನಿರ್ದೇಶಕ ರಾಮಪ್ರಸಾದ್ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ನಟಿಸಿದ್ದೇನೆ. ಅವರು ಬಳಸಿಕೊಳ್ಳುವ ಮಾಧ್ಯಮ ವಿಶೇಷವಾಗಿರುತ್ತದೆ. ಯೋಗಿ, ಕಾವ್ಯ ಶೆಟ್ಟಿ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಈ ಹಿಂದೆ ನಟಿಸಿದ್ದೇನೆ. ಇದರಲ್ಲೂ ನಟಿಸಿದ್ದೇನೆ. ಈ ಸಂದರ್ಭಕ್ಕೆ ‘ಲಂಕೆ’ ಯ ಗೆಲುವು ನಿಜಕ್ಕೂ ಖುಷಿ ತಂದಿದೆ’ ಎಂದರು ನಟ ಸುಚೀಂದ್ರ ಪ್ರಸಾದ್.

‘ಕಥೆ ಕೇಳಿದಾಗ ತುಂಬಾ ಹಿಡಿಸಿತು. ಹಾಗಾಗಿ ಪಾತ್ರ ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ಉತ್ತಮ ಮನ್ನಣೆ ದೊರೆತಿದೆ.
ಇಂತಹ ಪಾತ್ರ ಕೊಟ್ಟ ನಿರ್ದೇಶಕರಿಗೆ ಆಭಾರಿ’ ಎಂದರು ಎಸ್ಟರ್ ನೊರೋನ್ಹ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು