ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಲೂಪ್ ಲಪೆಟಾ' ಟ್ರೈಲರ್‌: ತಾಪ್ಸಿ, ತಾಹಿರ್‌ ರಾಜ್‌ ಮಸ್ತ್‌ ಕಮಾಲ್‌...

Last Updated 13 ಜನವರಿ 2022, 10:53 IST
ಅಕ್ಷರ ಗಾತ್ರ

ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಲೂಪ್ ಲಪೆಟಾ' ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.

ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿರುವುದರಿಂದ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಟ್ರೈಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಈ ಸಿನಿಮಾ ಫೆಬ್ರುವರಿ 4ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ತಾಪ್ಸಿ ಕೂಡ ಚಿತ್ರದ ಟ್ರೈಲರ್‌ ಹಂಚಿಕೊಂಡಿದ್ದು, ಚಿತ್ರವನ್ನು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

'ಹೇ ಜೋಲರ್ (jholer) ತಾಹಿರ್ ರಾಜ್ ಭಾಸಿನ್, ಈ ಶಾರ್ಟ್‌ಕಟ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತೀರಾ? ಈ ಬಾರಿ ಅವರನ್ನು ರಕ್ಷಿಸಬಹುದೇ? ಲೂಪ್ ಲಪೆಟಾಗಾಗಿ ಸಿದ್ಧವಾಗಿರಿ ಎಂದು ತಾಪ್ಸಿ ಹೇಳಿದ್ದಾರೆ.

ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಮತ್ತು ಎಲಿಪ್ಸಿಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಆಕಾಶ್ ಭಾಟಿಯಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಲೂಪ್ ಲಪೆಟಾ ಸಿನಿಮಾ 1998ರ ಜರ್ಮನ್‌ನ ಹಿಟ್ ಚಿತ್ರ ಟಾಮ್ ಟೈವರ್ ನಿರ್ದೇಶನದ 'ರನ್ ಲೋಲಾ ರನ್‌'ನ ಬಾಲಿವುಡ್ ರಿಮೇಕ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT