‘ಲವ್ ಯು ಮುದ್ದು’ ಸಿನಿಮಾ ಟೈಟಲ್ ಹಾಗೂ ತನ್ನ ಕಂಟೆಂಟ್ ಮೂಲಕವೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದೇ ಮೊದಲ ಬಾರಿಗೆ ಪ್ರೀತಿ ಕಥೆಯನ್ನು ಕುಮಾರ್ ಅವರು ತೆರೆಗೆ ತರುತ್ತಿದ್ದಾರೆ. ಅದರಲ್ಲಿಯೂ ನೈಜ ಘಟನೆ ಆಧರಿಸಿ ಅದನ್ನು ದೃಶ್ಯ ರೂಪಕ್ಕೆ ತರುತ್ತಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವ ದಂಪತಿ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಭಾಯ್ ಶಿಂಧೆ ಅವರ ಕಥೆ ಈಗ ‘ಲವ್ ಯು ಮುದ್ದು’ ಸಿನಿಮಾ ರೂಪ ತಾಳಿದೆ.

ಮನ ಮುಟ್ಟುವ ಕಥೆ

ಪ್ರೀತಿಯೇ ಸರ್ವಸ್ವ, ಪ್ರೀತಿಯೇ ಸಕಲ ಎನ್ನುವುದನ್ನು ಸಾಬೀತು ಮಾಡಿದ ಆಕಾಶ್ ಹಾಗೂ ಅಂಜಲಿ ಜೋಡಿಯ ಜೀವನದಲ್ಲಾದ ಏಳುಬೀಳಿನ ಕಥೆಯನ್ನು ಕುಮಾರ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಆಕಾಶ್-ಅಂಜಲಿ ಬಾಳಲ್ಲಿ ಆಗಿದ್ದೇನು?

ಆಕಾಶ್ ಹಾಗೂ ಅಂಜಲಿ ಪ್ರೀತಿಸಿ ಮದುವೆಯಾದ ಜೋಡಿ. ನವದಂಪತಿ ದೇವರ ದರ್ಶನ ಪಡೆಯಲು ಹೋದಾಗ ಊಹಿಸಲಾಗದ ಘಟನೆಯೊಂದು ನಡೆಯುತ್ತದೆ. ಅವರಿಬ್ಬರ ಬಾಳಲ್ಲಿ ನಡೆದ ಘೋರ ದುರಂತ ಏನು ಅನ್ನೋದನ್ನು ‘ಲವ್ ಯು ಮುದ್ದು’ ಸಿನಿಮಾದಲ್ಲಿಯೇ ನೋಡಬೇಕು.

ಭಾವನಾತ್ಮಕ ಪಯಣ ಲವ್ ಯು ಮುದ್ದು

ಲವ್ ಯು ಮುದ್ದು ಭಾವುಕ ಸಿನಿಮಾ. ಚಿತ್ರ ನೋಡಿ ಹೊರಬಂದವರ ಕಣ್ಣಂಚಲ್ಲಿ ನೀರು ಬರುವುದು ಖಚಿತ ಅನ್ನೋದು ಚಿತ್ರತಂಡದ ಭರವಸೆ. ರಿಯಲ್ ಜೋಡಿ ಜೀವನದ ಬಂಧವನ್ನು ಸ್ಪರ್ಶಿಸುವ ಸಿನಿಮೀಯ ಅನುಭವವನ್ನು ನೀವು ಚಿತ್ರಮಂದಿರದಲ್ಲೇ ಎಂಜಾಯ್ ಮಾಡಬಹುದು ಅನ್ನೋದು ನಿರ್ದೇಶಕ ಕುಮಾರ್ ಅವರ ಮಾತು.

ಆಕಾಶ್-ಅಂಜಲಿಯಾಗಿ ಸಿದ್ದು-ರೇಷ್ಮಾ ನಟನೆ

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಾರಥಿ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವನ್ನು ಕಿಶನ್ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಕಿಶನ್ ಟಿ.ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್. ತಂಡದ ಭಾಗವಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ.ಎಸ್.ದೀಪು ಸಂಕಲನ ನಿರ್ವಹಿಸಿದ್ದಾರೆ. ಇದೇ ನವೆಂಬರ್ 7ಕ್ಕೆ ರಾಜ್ಯಾದ್ಯಂತ ಲವ್ ಯು ಮುದ್ದು ಸಿನಿಮಾ ಬಿಡುಗಡೆಯಾಗುತ್ತಿದೆ. ಜಗದೀಶ್ ಫಿಲ್ಮ್ಸ್ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.