ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾ‘ ಚುನಾವಣೆಯಲ್ಲಿ ಸೋಲು ಕಂಡ ನಟ ಪ್ರಕಾಶ್ ರಾಜ್

Last Updated 11 ಅಕ್ಟೋಬರ್ 2021, 11:09 IST
ಅಕ್ಷರ ಗಾತ್ರ

ಹೈದರಾಬಾದ್: ಭಾನುವಾರ ನಡೆದ ‘ತೆಲುಗು ಮೂವೀಸ್‌ ಆರ್ಟಿಸ್ಟ್ಸ್ ಅಸೋಶಿಯೇಷನ್’ (MAA) ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ನಟ ಹಾಗೂ ನಿರ್ಮಾಪಕ ಮೋಹನ್‌ ಬಾಬು ಅವರ ಮಗಮಂಚು ವಿಷ್ಣು ವಿರುದ್ಧ ಸೋಲು ಕಂಡಿದ್ದಾರೆ. 900 ಅರ್ಹ ಮತದಾರರ ಪೈಕಿ650ಕ್ಕೂ ಹೆಚ್ಚುಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆ ತಡರಾತ್ರಿವರೆಗೂ ನಡೆದು ಫಲಿತಾಂಶ ಪ್ರಕಟಗೊಂಡಿದೆ.

ಪ್ರಕಾಶ್‌ ರಾಜ್‌ 274 ಮತಗಳನ್ನು ಗಳಿಸಿದರೆ, ವಿಷ್ಣು 381 ಮತಗಳನ್ನು ಗಳಿಸಿದ್ದಾರೆ.

ಪ್ರಕಾಶ್ ರಾಜ್ ಪ್ಯಾನೆಲ್‌ನ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ ಸ್ಥಾನ ಗೆದ್ದುಕೊಂಡಿದ್ದು ಬಿಟ್ಟರೇ, ಬಹುತೇಕ ಸ್ಥಾನಗಳನ್ನು ಮಂಚು ವಿಷ್ಣು ಅವರ ಪ್ಯಾನೆಲ್ ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಷ್ಣು ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಮಂಚು ವಿಷ್ಣು ಗೆಲುವಿನಲ್ಲಿ ಅವರ ತಂದೆ ಮೋಹನ್ ಬಾಬು ಅವರ ಶ್ರಮ ದೊಡ್ಡದಿದೆ ಎನ್ನಲಾಗುತ್ತಿದೆ.

ಮಂಚು ವಿಷ್ಣು
ಮಂಚು ವಿಷ್ಣು

ಚುನಾವಣೆಗೂ ಪೂರ್ವ ತೆಲುಗು ಚಿತ್ರರಂಗದಲ್ಲಿ ಮಾ ಚುನಾವಣೆ ವಿಷಯ ಬಹಳ ಜೋರಾಗಿ ನಡೆದಿತ್ತು. ನಟ ಚಿರಂಜೀವಿ ಹಾಗೂ ಅವರ ಕುಟುಂಬದವರ ಬೆಂಬಲ ಇದ್ದರೂ ಪ್ರಕಾಶ್ ರಾಜ್ ಸೋತಿದ್ದಾರೆ. ಮಂಚು ವಿಷ್ಣು ಪ್ಯಾನೆಲ್‌ನವರು, ಪ್ರಕಾಶ್ ರಾಜ್ ಹೊರಗಿನವರು ಎಂದು ಬಿಂಬಿಸಿದ್ದರು. ಪರಸ್ಪರ ವಾಗ್ದಾಳಿಗಳು ನಡೆದಿದ್ದವು.

‘ಪವನ್ ಕಲ್ಯಾಣ್ ಸಿನಿಮಾದ ಮಾರ್ನಿಂಗ್ ಶೋ ಒಂದರ ಕಲೆಕ್ಷನ್ ಮಂಚು ವಿಷ್ಣು ಸಿನಿಮಾದ ಬಜೆಟ್’ಎಂದು ಪ್ರಕಾಶ್ ರಾಜ್ ಮೂದಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT