ಮಂಗಳವಾರ, ಅಕ್ಟೋಬರ್ 27, 2020
24 °C

ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಮಹೇಶ್‌ ಬಾಬು ಪತ್ನಿ ನಮ್ರತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್‌ ಪ್ರಕರಣದಲ್ಲಿ ದಿನಕ್ಕೊಂದು ಸೆಲೆಬ್ರೆಟಿಗಳ ಹೆಸರು ಹೊರ ಬರುತ್ತಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದ ಟಾಲಿವುಡ್‌ನ ಖ್ಯಾತ ನಟ ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಹೆಸರು ಕೂಡ ಕೇಳಿ ಬರುತ್ತಿದೆ.

ಇಂಡಿಯಾ ಟುಡೇ ಸುದ್ದಿ ಮಾದ್ಯಮದ ವರದಿಯ ಪ್ರಕಾರ ಸುಶಾಂತ್‌ ಸಿಂಗ್ ರಜಪೂತ್ ಮ್ಯಾನೇಜರ್ ಜಯಾ ಶಾ ಅವರ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ನಮ್ರತಾ ಹೆಸರು ಕೂಡ ಇದೆ ಎನ್ನಲಾಗುತ್ತಿದೆ.

ಜಯಾ ಶಾ ಹಾಗೂ ಇತರ ಸೆಲೆಬ್ರೆಟಿಗಳ ನಡುವಿನ ವಾಟ್ಸ್‌ಆ್ಯಪ್ ಚಾಟ್ ಈಗ ಹೆಚ್ಚು ಸುದ್ದಿ ಮಾಡುತ್ತಿದೆ.

ಎನ್‌ಸಿಬಿ ಹೆಚ್ಚಿನ ವಿಚಾರಣೆಗಾಗಿ ಜಯಾ ಶಾ ಅವರನ್ನು ಕರೆಸಿಕೊಂಡಿದ್ದು ವಿಚಾರಣೆ ವೇಳೆ ಜಯಾ ನಮೃತಾ ಅವರ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ.

ಅದೇನೆ ಇದ್ದರೂ ಜಯಾ ಶಾ ಹಾಗೂ ನಮೃತಾಗೆ ಏನು ಸಂಬಂಧ ಎಂಬುದು ಸ್ಪಷ್ಟವಾಗಿಲ್ಲ. ನಮೃತಾ 15 ವರ್ಷಗಳಿಂದೀಚೆಗೆ ಹಿಂದಿ ಸಿನಿಮಾಗಳಲ್ಲಿ ನಟಿಸಿಲ್ಲ. ಅಲ್ಲದೇ 15 ವರ್ಷಗಳಿಂದ ತಮ್ಮ ಪತಿ ತೆಲುಗು ಸೂಪರ್‌ ಸ್ಟಾರ್ ಮಹೇಶ್ ಬಾಬು ಜೊತೆ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

ಈ ನಡುವೆ ನಟಿಯರಾದ ರಕುಲ್ ಪ್ರೀತ್‌, ದೀಪಿಕಾ ಪಡುಕೋಣೆ, ದಿಯಾ ಮಿರ್ಜಾ ಹಾಗೂ ಸಾರಾ ಅಲಿ ಖಾನ್ ಮೇಲೆ ಎನ್‌ಸಿಬಿ ದೃಷ್ಟಿ ನೆಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು