ಬುಧವಾರ, ಆಗಸ್ಟ್ 4, 2021
25 °C

ಬಾಲಿವುಡ್‌ ಹಾಟ್‌ ಬ್ಯೂಟಿ ಮಲೈಕಾ ಈಸ್‌ ಬ್ಯಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

malaika

ಬಾಲಿವುಡ್‌ ಹಾಟ್‌ ಬ್ಯೂಟಿ ಮಲೈಕಾ ಅರೋರಾ ಮತ್ತೆ ಸುದ್ದಿಯಲ್ಲಿದ್ದಾರೆ. ಫಿಟ್ನೆಸ್‌, ಹಾಟ್‌ ಲುಕ್‌, ಡ್ರೆಸ್‌, ಅಫೇರ್‌, ಡೇಟಿಂಗ್ ಹೀಗೆ ನಾನಾ ಕಾರಣಗಳಿಗಾಗಿ‌ ಸದಾ ಸುದ್ದಿಯಲ್ಲಿರುವ ಮಲೈಕಾ ಬಹಳ ದಿನಗಳ ಬ್ರೇಕ್‌ ನಂತರ ಯೋಗಾಸನದ ಫೋಟೊ ಹಂಚಿಕೊಂಡಿದ್ದಾರೆ.

46 ವಯಸ್ಸಿನಲ್ಲೂ ಬಳ್ಳಿಯಂತೆ ಬಳಕುವ ದೇಹಸಿರಿ ಹೊಂದಿರುವ ಮಲೈಕಾ ಮೊದಲಿನಿಂದಲೂ ಆರೋಗ್ಯ, ಸೌಂದರ್ಯ ಮತ್ತು ಫಿಟ್ನೆಸ್‌ಗೆ ಹೆಸರಾದವರು.


ಮಲೈಕಾ ಯೋಗ ಭಂಗಿ

ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿಯೇ ಯೋಗಾಭ್ಯಾಸ ಮಾಡುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ #ಮಲೈಕಾ ಮೂವ್‌ ಆಫ್ ‌ದಿ ವೀಕ್‌ ಹೆಸರಿನಲ್ಲಿ ಹಂಚಿಕೊಂಡಿದ್ದಾರೆ.

ಮೈಗೆ ಅಂಟಿಕೊಂಡಿರುವ ಕಡು ನೀಲಿ ಬಣ್ಣದ ಬಟ್ಟೆಯಲ್ಲಿ ದೇಹವನ್ನು ಕಾಮನಬಿಲ್ಲಿನಂತೆ ಅರ್ಧ ವೃತ್ತಾಕಾರದಲ್ಲಿ ಮಣಿಸಿರುವ ಹಾಲಾಸನ ಭಂಗಿಯಲ್ಲಿ ಮಲೈಕಾರನ್ನು ನೋಡಿದರೆ ಬಳ್ಳಿಯಂತೆ ಬಳಕುವ ಆಕೆಯ ದೇಹ ಸೌಂದರ್ಯದ ಗುಟ್ಟು ಏನೆಂದು ಗೊತ್ತಾಗುತ್ತದೆ.

ನುರಿತ ಯೋಗ ಶಿಕ್ಷಕರ ದೇಹ ಕೂಡ ಅಷ್ಟು ಸುಂದರವಾಗಿ ಮಣಿಯಲಾರದೇನೋ ಎಂಬಷ್ಟು ಮಲೈಕಾ ಅವರ ಹಾಲಾಸನ ಭಂಗಿ ಪರ್ಫೆಕ್ಟ್‌ ಆಗಿದೆ. 

‘ಯೆಸ್‌, ಐ ಆಮ್‌ ಬ್ಯಾಕ್‌.... ಇಷ್ಟು ದಿನ ನಾನು ಎಲ್ಲಿ ಕಣ್ಮರೆಯಾಗಿದ್ದೆ ಎಂದು ಯೋಚಿಸುತ್ತಿದ್ದಿರಾ? ಈಗೋ ಮತ್ತೇ ನಾನು ಮರಳಿ ಬಂದಿದ್ದೇನೆ. ಈ ಲಾಕ್‌ಡೌನ್‌ ನಮ್ಮನ್ನು ನಾವು ಅರಿಯುವಂತೆ ಮಾಡಿದೆ. ನಮ್ಮನ್ನು ನಮ್ಮ ಬಳಿ ಮತ್ತಷ್ಟು ಹತ್ತಿರಕ್ಕೆ ಕರೆ ತಂದಿದೆ. ನಮಗಾಗಿ ನಾವು ಒಂದಿಷ್ಟು ಸಮಯ ಮೀಸಲಾಗಿಡಬೇಕಾಗುತ್ತದೆ’ ಎಂದು ಅಡಿ ಬರಹ ಬೇರೆ ಬರೆದಿದ್ದಾರೆ.

ಪ್ರತಿ ಸೋಮವಾರ ತಪ್ಪದೇ ಇನ್‌ಸ್ಟಾಗ್ರಾಂನಲ್ಲಿ ಯೋಗ ಭಂಗಿಯೊಂದನ್ನು ಪೋಸ್ಟ್‌ ಮಾಡುತ್ತಿದ್ದ ಈ ಸುಂದರಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೊಸ ಫೋಟೊ ಹಂಚಿಕೊಂಡಿರಲಿಲ್ಲ. ಸದ್ಯ ಮತ್ತೊಂದು ಹೊಸ ಸುದ್ದಿ ನೀಡುವವರೆಗೂ ಮಲೈಕಾ ಈ ಚಿತ್ರವೇ ಒಂದು ತಿಂಗಳಿಗಾಗುವಷ್ಟು ಸುದ್ದಿಗೆ ಆಹಾರವಾಗುವುದರಲ್ಲಿ ಅನುಮಾನವಿಲ್ಲ!   

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು