ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೀಕರಣದ ವಿರಾಮದ ವೇಳೆ ಅವಘಡ: ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಸಾವು

Last Updated 26 ಡಿಸೆಂಬರ್ 2020, 7:44 IST
ಅಕ್ಷರ ಗಾತ್ರ

ತಿರುವನಂತಪುರಂ: ಅಯ್ಯಪನ್ನುಂ ಕೋಶಿಯುಂ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿ ವಿಮರ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ಅವರು ನಿನ್ನೆ ಸಂಜೆ ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಭವಿಸಿದಾಗ ನಟ ಜೊಜು ಜಾರ್ಜ್ ಅಭಿನಯದ 'ಪೀಸ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅನಿಲ್, ಚಿತ್ರೀಕರಣದ ವಿರಾಮದ ಸಮಯದಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ತೆರಳಿದ್ದರು.

ನಟನ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಗಮನಾರ್ಹ ಪಾತ್ರಗಳಲ್ಲಿ ನಟಿಸುವ ಮೂಲಕ ಅನಿಲ್ ನೆಡುಮಂಗಾಡ್ ಅವರು ಮಲಯಾಳಂ ಚಿತ್ರಗಳಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ತಮ್ಮ ಅಭೂತಪೂರ್ವ ನಟನಾ ಕೌಶಲ್ಯದಿಂದಾಗಿ ಚಲನಚಿತ್ರ ವೀಕ್ಷಕರಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಲಯಾಳಂ ಟೆಲಿವಿಷನ್ ಚಾನೆಲ್‌ಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ನಜನ್ ಸ್ಟೀವ್ ಲೋಪೆಜ್, ಪಾವಡಾ, ಕಮ್ಮಟ್ಟಿ ಪದಮ್, ಕಿಸ್ಮತ್, ಪೊರಿಂಜು ಮರಿಯಮ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ.

ಆರು ತಿಂಗಳ ಹಿಂದೆ ನಿಧನರಾದ ಅಯ್ಯಪನ್ನುಂ ಕೋಶಿಯುಂ ನಿರ್ದೇಶಕ ಕೆ.ಆರ್. ಸಚಿದಾನಂದನ್ (ಸಚಿ) ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ಅನಿಲ್, ಫೇಸ್‌ಬುಕ್ ಪೋಸ್ಟ್‌ನಲ್ಲಿಹೃದಯ ಸ್ಪರ್ಶಿಯಾಗಿ ಬರೆದಿದ್ದರು.

ಎರಡು ದಿನಗಳ ಹಿಂದೆಯಷ್ಟೇ 37 ವರ್ಷದ ಮಲಯಾಳಂ ಚಿತ್ರ ನಿರ್ದೇಶಕ ಶಹನವಾಸ್ ನಾರಾನಿಪುಜ ಹೃದಯಾಘಾತದಿಂದ ಮೃತಪಟ್ಟಿದ್ದರು.

ಇದೇ ವೇಳೆ ಅನಿಲ್ ಅವರ ಸಾವಿಗೆ ಮಲಯಾಳಂ ಚಿತ್ರರಂಗದ ನಟರಾದ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಬಿಜು ಮೆನನ್ ಮತ್ತು ಸೂರಜ್ ವೆಂಜರಾಮುಡು ಸೇರಿ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT