ಕೊಚ್ಚಿ: ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್ ಅವರನ್ನು ಕೇರಳ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿಯಾಗಿದ್ದ ಸುನೀಲ್ ಎನ್.ಎಸ್ ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಜನರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ನಟ ದಿಲೀಪ್ ಅವರನ್ನು ಹೊರತುಪಡಿಸಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ ಮೂವರನ್ನು ಕೂಡ ನಿರಾಪರಾಧಿಗಳು ಎಂದು ಹೈಕೋರ್ಟ್ನ ನ್ಯಾ. ಹನಿ ಎಂ ವರ್ಗೀಸ್ ಅವರು ತೀರ್ಪು ನೀಡಿದ್ದಾರೆ.

2017ರಲ್ಲಿ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರ ಕಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ದೂರು ನೀಡಲಾಗಿತ್ತು. ನಟ ದಿಲೀಪ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು

ನಟ ದಿಲೀಪ್ ಅವರು ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.
.ಮಲಯಾಳ ನಟ ದಿಲೀಪ್ ವಿರುದ್ಧ ಮತ್ತಷ್ಟು ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.