ತಿರುವನಂತಪುರ: ಮಲಯಾಳ ಚಿತ್ರಗಳಲ್ಲೇ ಅತ್ಯಂತ ಹಿಂಸಾತ್ಮಕ ಚಿತ್ರ ಎನಿಸಿಕೊಂಡ ‘ಮಾರ್ಕೊ’, ಟಿ.ವಿ. ವಾಹಿನಿಗಳಲ್ಲಿ ಪ್ರಸಾರದ ಹಕ್ಕು ಪಡೆಯಲು ವಿಫಲವಾಗಿದೆ.

ಚಿತ್ರಕ್ಕೆ ನೀಡಲಾಗಿರುವ ‘ಎ’ ಪ್ರಮಾಣಪತ್ರವನ್ನು ‘ಯು/ಎ’ಗೆ ಬದಲಾಯಿಸಿ ಕೊಡುವಂತೆ, ಚಿತ್ರದ ನಿರ್ಮಾಪಕ ಷರೀಫ್ ಮೊಹಮ್ಮದ್ ಅವರು ಸಲ್ಲಿಸಿದ್ದ ಮನವಿಯನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ತಿರಸ್ಕರಿಸಿದೆ. ಹೀಗಾಗಿ, ಟಿ.ವಿ. ವಾಹಿನಿಗಳಲ್ಲಿ ಚಿತ್ರದ ಪ್ರಸಾರಕ್ಕೆ ಅವಕಾಶ ಇಲ್ಲದಂತಾಗಿದೆ.

ಕೇರಳದಲ್ಲಿ, ‘ಯು’ ಹಾಗೂ ‘ಯು/ಎ’ ಪ್ರಮಾಣಪತ್ರ ಪಡೆದಿರುವ ಚಿತ್ರಗಳಿಗೆ ಮಾತ್ರ ಟಿ.ವಿ. ವಾಹಿನಿಗಳಲ್ಲಿ ಪ್ರಸಾರಕ್ಕೆ ಅವಕಾಶ ನೀಡಲಾಗುತ್ತದೆ.

ನಟ ಉನ್ನಿ ಮುಕುಂದನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಮಾರ್ಕೊ’ ಚಿತ್ರವು 2024ರ ಡಿಸೆಂಬರ್ 20ರಂದು ಬಿಡುಗಡೆಯಾಗಿತ್ತು. ಈ ಚಿತ್ರವು ಸೋನಿಲಿವ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಫೆ. 14ರಿಂದ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.