ಭಾನುವಾರ, ಮೇ 29, 2022
31 °C

ಮಲಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿಗೆ ಕೋವಿಡ್; 'ಸಿಬಿಐ 5' ಚಿತ್ರೀಕರಣ ಸ್ಥಗಿತ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಮಲಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿ ಅವರಿಗೆ ಭಾನುವಾರ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಮಧು ನಿರ್ದೇಶನದ ಅವರ ಸಿನಿಮಾ 'ಸಿಬಿಐ 5' ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಸದ್ಯ ನಟನ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 'ಸಿಬಿಐ 5' ಸಿನಿಮಾವು ಕೆ. ಮಧು ನಿರ್ದೇಶನದ ಸರಣಿ ಚಲನಚಿತ್ರಗಳ ಪೈಕಿ ಐದನೆಯದು. ಈ ಎಲ್ಲ ಸಿನಿಮಾಗಳು ಈಗಾಗಲೇ ಹಿಟ್ ಆಗಿವೆ.

ಮಮ್ಮುಟ್ಟಿ ಅವರು 'ಸಿಬಿಐ 5' ಚಿತ್ರದಲ್ಲಿ ಸೇತುರಾಮನ್ ಅಯ್ಯರ್ ಅವರ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮುಕೇಶ್ ಮತ್ತು ಜಗತಿ ಶ್ರೀಕುಮಾರ್ ಸೇರಿದಂತೆ ಪ್ರಮುಖ ತಾರಾಗಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು