ಕೆ.ಆರ್.ಪೇಟೆ: ಹಿಂದಿ, ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದ ಯುವನಟ ಪವನ್ (24) ಹೃದಯಾಘಾತದಿಂದ ಗುರುವಾರ ಮುಂಬೈನಲ್ಲಿ ಮೃತಪಟ್ಟಿದ್ದಾರೆ.
ಹರಿಹರಪುರ ಗ್ರಾಮದ ನಾಗರಾಜು– ಸರಸ್ವತಿ ದಂಪತಿಯ ಪುತ್ರರಾಗಿದ್ದ ಪವನ್ ಪರಭಾಷೆ ಚಿತ್ರಗಲ್ಲಿ ಅಭಿನಯಿಸುವ ಕನಸಿನೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಮುಂಬೈನಲ್ಲಿ ತಮ್ಮ ಮನೆಯಲ್ಲಿ ಗುರುವಾರ ನಸುಕಿನ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಶುಕ್ರವಾರ ಬೆಳಿಗ್ಗೆ ಕೆ.ಆರ್.ಪೇಟೆಗೆ ತಂದು ಗ್ರಾಮದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಪವನ್ ಕುಟುಂಬದ ಸದಸ್ಯರು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.