ಮಂಗಳವಾರ, ಮೇ 24, 2022
25 °C

ವೈರಲ್ ಆದ ‘ಮಾರಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮಾರಾಯ’ ಚಿತ್ರಕ್ಕೆ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಉದಯ್‌ಪ್ರೇಮ್ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಈ ಚಿತ್ರಕ್ಕಿದೆ. ಚಿತ್ರದ ಟ್ರೈಲರ್‌ ಕೆಎನ್‌ಎಸ್‌ ಡಿಜಿಟಲ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ತಾರಾಗಣದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್, ಡಿಂಗ್ರಿನಾಗರಾಜ್, ಬಿಗ್‌ಬಾಸ್ ಖ್ಯಾತಿಯ ದಿವಾಕರ್, ಸಲಗ ಸೂರಿಯಣ್ಣ (ದಿನೇಶ್), ಮಜಾಭಾರತದ ಚಿಲ್ಲರ್‌ಮಂಜು, ಬಸು, ಜಿಕೆ, ಮೈ ಆಟೋ ಗ್ರಾಫ್‌ನ ಕುಮಾರ್‌ದೇವ್, ಮಣಿ, ಶ್ರೇಯ, ತೀನಾತಿಮಯ್ಯ, ಸ್ನೇಹ ಮುಂತಾದವರು ನಟಿಸಿದ್ದಾರೆ.

ವಿನುಮನಸು ಅವರ ಸಂಗೀತ, ಉದಯಾನಂದ ಬರ್ಕೆ ಅವರ ಛಾಯಾಗ್ರಹಣ, ಶಿವಕುಮಾರ್.ಎ ಸಂಕಲನ, ಚಂದ್ರುಬಂಡೆ ಅವರ ಸಾಹಸವಿದೆ. ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು