ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಿರ್ದೇಶಕಿಯ ‘ರಾಕ್ಷಸತಂತ್ರ’

Published 13 ಮಾರ್ಚ್ 2024, 23:59 IST
Last Updated 13 ಮಾರ್ಚ್ 2024, 23:59 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತುಂಬಾ ವಿರಳ. ಅದರಲ್ಲಿಯೂ ಹಾರರ್‌ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕಿಯರು ಬಹಳ ಕಡಿಮೆ. ಮೇಘಾ ಅಕ್ಷರಾ ‘ರಾಕ್ಷಸತಂತ್ರ’ ಎಂಬ ಹಾರರ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ. 

‘ಐದು ಜನ ಸ್ನೇಹಿತರು ವಿಡಿಯೊ ಕಾನ್ಫರೆನ್ಸ್ ಕಾಲ್ ಮಾಡಿಕೊಂಡಿರುವಾಗ ಅಚಾನಕ್ಕಾಗಿ ಒಂದು ವಿಚಿತ್ರವನ್ನು ನೋಡುತ್ತಾರೆ. ಅದರಿಂದ ಮುಂದೆ ಏನೇನಾಗುತ್ತದೆ ಎಂಬುದೇ ಕಥೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಘಟನಾವಳಿಗಳೊಂದಿಗೆ ಚಿತ್ರಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತೇನಿಲ್ಲ. ರಾತ್ರಿ ಆರಂಭವಾಗಿ ಬೆಳಗಿನ ಜಾವದ ವೇಳೆಗೆ ಮುಗಿಯುವ ಕಥೆಯಿದು’ ಎನ್ನುತ್ತಾರೆ ಮೇಘಾ.

ಈಗಾಗಲೇ ಚಿತ್ರೀಕರಣ ಮುಗಿದಿದ್ದು ಚಿತ್ರ ತೆರೆಗೆ ಬರಲು ಸಿದ್ಧವಿದೆ. ಬಹುತೇಕ ಹೊಸಬರೇ ತಾರಾಗಣದಲ್ಲಿದ್ದಾರೆ. ದಿನೇಶ್ ಬಾಬು ಛಾಯಾಚಿತ್ರಗ್ರಹಣ, ಯಶವಂತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT