ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣು ಮಗುವಿನ ತಾಯಿಯಾದ ಮಿಲನಾ ನಾಗರಾಜ್: ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಪೋಸ್ಟ್

Published 5 ಸೆಪ್ಟೆಂಬರ್ 2024, 4:44 IST
Last Updated 5 ಸೆಪ್ಟೆಂಬರ್ 2024, 4:44 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕ್ಯೂಟ್‌ ಜೋಡಿ ಎಂದೇ ಹೆಸರಾಗಿದ್ದ ನಟಿ ಮಿಲನ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂ‍ಪತಿಗೆ ಹೆಣ್ಣು ಮಗು ಜನಿಸಿದೆ. 

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕೃಷ್ಣ, ‘ನಮಗೆ ಹೆಣ್ಣು ಮಗು ಜನಿಸಿದೆ. ತಾಯಿ ಮತ್ತು ಮಗು ಚೆನ್ನಾಗಿಯೇ ಇದ್ದಾರೆ. ತಾಯಿಯಾಗುವ ಪಯಣದಲ್ಲಿ ಮಿಲನಾ ಅವರು ಅನುಭವಿಸಿದ ನೋವು, ತ್ಯಾಗ, ಧೈರ್ಯದ ಬಗ್ಗೆ ಹೆಮ್ಮೆ ಇದೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ.. ಮಹಿಳೆಯರ ಬಗ್ಗೆ ನನ್ನ ಗೌರವವು ದುಪ್ಪಟ್ಟಾಗಿದೆ. ನಾನು ಅದೃಷ್ಟವಂತನಾಗಿದ್ದೇನೆ, ಏಕೆಂದರೆ ನನಗೆ ಈಗ ಮಗಳಿದ್ದಾಳೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಪರಸ್ಪರ ಪ್ರೀತಿಸಿದ್ದ ಈ ಜೋಡಿ 2021ರ ಫೆ.14ರಂದು ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಮಾರ್ಚ್‌ನಲ್ಲಿ ವಿಶೇಷ ಫೋಟೊ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಹಿರಂಗಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT