ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ ನೋಡಿ: ಅಭಿನಯ ಅಪ್ಸರೆಯಾದ್ರು ‘ಮಿಸ್‌ ನಂದಿನಿ’

Last Updated 4 ಆಗಸ್ಟ್ 2022, 7:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆ ಉಳಿಸುವ ಕಥಾ ಹಂದರ ಹೊಂದಿದೆ ‘ಮಿಸ್‌ ನಂದಿನಿ’. ಪ್ರಿಯಾಂಕಾ ಉಪೇಂದ್ರ ಅಭಿನಯದ ಚಿತ್ರವಿದು. ವಿಶೇಷ ಏನೆಂದರೆ ಈ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಪ್ರಿಯಾಂಕಾ ಅವರಿಗೆ ಅಭಿಮಾನಿಗಳು ‘ಅಭಿನಯ ಅಪ್ಸರೆ’ ಎಂದು ಬಿರುದು ಕೊಟ್ಟಿದ್ದಾರೆ.

ಚಿತ್ರದಲ್ಲಿ ಪ್ರಿಯಾಂಕಾ ಸರ್ಕಾರಿ ಶಾಲೆಯ ಶಿಕ್ಷಕಿ. ಕನ್ನಡವನ್ನು ಸಿನಿಮಾ ಸೆಟ್‌ನಲ್ಲೇ ಕಲಿಯುತ್ತಾ ಅಭಿನಯಿಸಿದ್ದಾರಂತೆ ಅವರು.

‘ಮಕ್ಕಳ ಜತೆ ನಟಿಸುವುದೇ ಒಂದು ರೀತಿಯ ಖುಷಿ ಸಿಗುತ್ತದೆ. ಅವರ ಕಾಮಿಡಿ ಟ್ರ್ಯಾಕ್ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸಿನಿಮಾಗಳಲ್ಲಿ ಮಾಡುತ್ತಿದ್ದರೂ ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು. ಅಭಿಮಾನಿಗಳು ಪ್ರೀತಿಯಿಂದ ಬಿರುದನ್ನು ನೀಡಿದ್ದಾರೆ. ಅವರಿಂದಲೇ ಚಿತ್ರರಂಗದಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಲ್ಲಿಯ ತನಕ ಬಂದಿದ್ದೇನೆ’ ಎಂದರು ಪ್ರಿಯಾಂಕಾ.

ಇಂದಿನ ಸರ್ಕಾರಿ ಶಾಲೆಯ ಸ್ಥಿತಿಗತಿ ಹಾಗೂ ಅಭಿವೃದ್ಧಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಹಳ್ಳಿಯಲ್ಲಿ ಒಂದು ಖಾಸಗಿ ಶಾಲೆ ತೆರೆದರೆ, ಅದು ಹತ್ತು ಸರ್ಕಾರಿ ಶಾಲೆಯನ್ನು ಕಬಳಿಸುತ್ತದೆ. ಹಿಂದುಳಿದ, ದಲಿತ ವರ್ಗ ಇರುವ ಕಡೆ ಶಾಲೆಗಳು ಕುಂಠಿತವಾಗಿದೆ. ಶಿಕ್ಷಣ ಇಲಾಖೆ ಒಬ್ಬ ವಿದ್ಯಾರ್ಥಿಗೆ ₹ 4 ಸಾವಿರ ಖರ್ಚು ಮಾಡುತ್ತಿದೆ. ಎಲ್ಲವನ್ನು ಸರ್ಕಾರವೇ ನೋಡಿಕೊಳ್ಳಬೇಕು ಅಂದರೆ ಕಷ್ಟ. ಅಂತಹ ಪರಿಕಲ್ಪನೆಯನ್ನು ನಾವು ಮೊದಲು ಬಿಡಬೇಕು’ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.

ಶ್ರೀವಿಜಯ್ ಫಿಲಂಸ್ ಮೂಲಕ ನೀಲಕಂಠಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಶಾ ಸಹ ನಿರ್ಮಾಪಕರು.
‘ಕಾರವಾರ, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕ ಗುರುದತ್ ಎಸ್.ಆರ್.

ಮುಖ್ಯಮಂತ್ರಿಯಾಗಿ ಸಿದ್ಲಿಂಗು ಶ್ರೀಧರ್, ಶಿಕ್ಷಕರಾಗಿ ಅಪ್ಪಣ್ಣ, ರಘುಪಾಂಡೇಶ್ವರ್, ಅಧಿಕಾರಿಯಾಗಿ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆಯಾಗಿ ಲಕ್ಷೀಸಿದ್ದಯ್ಯಅಭಿನಯಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಸಾಯಿಸರ್ವೇಶ್ ಅವರದ್ದು. ‘ಕನ್ನಡ ಬೆಳಸೋರ್ ಬೇಡ ಬಳಸೋರ್ ಬೇಕು’ ಎಂಬ ಅಡಿಬರಹದ ಈ ಚಿತ್ರವು ಸೆಪ್ಟಂಬರ್‌ನಲ್ಲಿ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT