ಮುಂಬೈ: ದಿವಂಗತ ಚಿತ್ರ ನಿರ್ಮಾಪಕ ರಾಜ್ ಕೌಶಲ್ ಅವರನ್ನು ನೆನಪಿಸಿಕೊಂಡು ಮತ್ತೊಂದು ಭಾವನಾತ್ಮಕ ಪೋಸ್ಟ್ ಅನ್ನು ನಟಿ ಮಂದಿರಾ ಬೇಡಿ ಮಂಗಳವಾರ ರಾತ್ರಿ ಹಂಚಿಕೊಂಡಿದ್ದಾರೆ.

ಮಂದಿರಾ ಬೇಡಿ ಅವರ ಪತಿ, ಚಿತ್ರ ನಿರ್ಮಾಪಕ ರಾಜ್ ಕೌಶಲ್ ಜೂನ್ 30ರಂದು ಹೃದಯಾಘಾತದಿಂದ ಸಾವಿಗೀಡಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಪತಿಯ ಅಗಲಿಕೆಯ ನೋವಿನಲ್ಲಿರುವ ಮಂದಿರಾ ಬೇಡಿ 'ಮಿಸ್ ಯು ರಾಜಿ' ಎಂದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದರ ಜೊತೆಗೆ 'ರಾಜಿ' ಎಂಬ ಹಸ್ತಾಕ್ಷರಗಳನ್ನು ಹೊಂದಿರುವ ಚಿತ್ರವೊಂದನ್ನು ಲಗತ್ತಿಸಿದ್ದಾರೆ.

ಪತಿಯ ಸಾವಿನ ಬಳಿಕ ಮಂದಿರಾ ಬೇಡಿ ಅವರು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್ ಚಿತ್ರದ ಜಾಗದಲ್ಲಿ ಕಪ್ಪು ಬಣ್ಣವನ್ನು ಪೋಸ್ಟ್ ಮಾಡಿದ್ದಾರೆ.

ಮಂದಿರಾ ಬೇಡಿ ಮತ್ತು ರಾಜ್ ಕೌಶಲ್ 1999ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪತಿಯ ನಿಧನದ ನಂತರ ಮಂದಿರಾ ಬೇಡಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಇತರ ಪೋಸ್ಟ್‌ಗಳು ಇಲ್ಲಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.