ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ತುಂಬಾ ದಣಿದಿದ್ದೆ.. 'ಟೈಗರ್ 3' ಆ್ಯಕ್ಷನ್ ಸೀನ್‌ ಬಗ್ಗೆ ಕತ್ರಿನಾ ಮನದಾಳ

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ 'ಟೈಗರ್ 3' ಚಿತ್ರ ನ.12ರಂದು ಬಿಡುಗಡೆಯಾಗಲಿದೆ.
Published 6 ನವೆಂಬರ್ 2023, 11:16 IST
Last Updated 6 ನವೆಂಬರ್ 2023, 11:16 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ 'ಟೈಗರ್ 3' ಬಿಡುಗಡೆಗೆ ಸಿದ್ಧವಾಗಿದೆ. ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಬಾಲಿವುಡ್‌ ತಾರೆ ಕತ್ರಿನಾ ಕೈಫ್ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಕತ್ರಿನಾ ಅವರ ಆ್ಯಕ್ಷನ್ ಸೀನ್‌ಗಳು ಪ್ರೇಕ್ಷಕರನ್ನು ಸಖತ್ ಮೋಡಿ ಮಾಡಿವೆ.

ಸಿನಿಮಾದಲ್ಲಿ 'ಜೋಯಾ' ಎಂಬ ಪಾತ್ರಕ್ಕಾಗಿ ಕತ್ರಿನಾ ಬಣ್ಣ ಹಚ್ಚಿದ್ದಾರೆ. ಅದಕ್ಕಾಗಿ ಅವರು ಹಲವು ದಿನಗಳ ಕಾಲ ಕಠಿಣ ತಯಾರಿ ನಡೆಸಿದ್ದಾರೆ. ಅದರ ತಯಾರಿ ಹೇಗಿತ್ತು? ಎಂಬುದನ್ನು ತಿಳಿಸಲು ಕೆಲವು ವಿಡಿಯೊಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಮತ್ತು ಸಾಹಸ ದೃಶ್ಯಕ್ಕಾಗಿ ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಟೈಗರ್ 3 ಟ್ರೈಲರ್‌ನ ಗ್ಲಿಂಪ್ಸ್‌ನಲ್ಲಿ ಕತ್ರಿನಾ ಅವರ ಟವೆಲ್ ಫೈಟ್ ದೃಶ್ಯ ಸುದ್ದಿಯಾಗಿತ್ತು.

'ಟೈಗರ್‌ನಂತಹ ಆ್ಯಕ್ಷನ್ ಚಿತ್ರದಲ್ಲಿ ನಟಿಸುವಾಗ ನನ್ನ ಮಿತಿ ಮತ್ತು ಶಕ್ತಿಯನ್ನು ಪರೀಕ್ಷಿಸಲು ಸಾಧ್ಯವಾಯಿತು. ಇಲ್ಲಿ ನೋವು ಮತ್ತು ಶಕ್ತಿ ಎರಡರ ಅನುಭವವಿದೆ' ಎಂದು ಕತ್ರಿನಾ ಹೇಳಿದ್ದಾರೆ.

'ನಾನು ಅನೇಕ ದಿನಗಳಿಂದ ತುಂಬಾ ದಣಿದಿದ್ದೆ. ಈ ಬಾರಿ ತುಂಬಾ ಕಷ್ಟವೂ ಆಯಿತು. ಆಯಾಸ, ನೋವಿನ ನಡುವೆಯೂ ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಪ್ರತಿದಿನ ಎಷ್ಟು ಸಹಿಸಿಕೊಳ್ಳಬಲ್ಲೆ? ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡು ಮತ್ತೆ ಸಿದ್ಧಳಾಗುತ್ತಿದೆ' ಎಂದು ಕತ್ರಿನಾ ತರಬೇತಿ ಅವಧಿಯ ವಿಡಿಯೊದೊಂದಿಗೆ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. ದೀಪಾವಳಿಯಂದು ಚಿತ್ರ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT