ಶನಿವಾರ, ಮಾರ್ಚ್ 25, 2023
30 °C

ಸಮಂತಾ ಬಗ್ಗೆ ಕೇಳದಿದ್ದರೆ ಮಾತ್ರ ಮಾಧ್ಯಮ ಗೋಷ್ಠಿಗೆ ಹಾಜರಾಗುವೆ –ನಾಗಚೈತನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬರುತ್ತಿವೆ. ಇವರು ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. 

ಈ ನಡುವೆ ನಾಗಚೈತನ್ಯ, ಸಮಂತಾ ಬಗ್ಗೆ ಪ್ರಶ್ನೆ ಕೇಳದಿದ್ದರೆ ಮಾತ್ರ ಪತ್ರಿಕಾ ಗೋಷ್ಠಿಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ನಟಿಸಿರುವ ’ಲವ್‌ ಸ್ಟೋರಿ’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ ಹಾಗೂ ಪ್ರಚಾರದ ಕೆಲಸಗಳಲ್ಲಿ ನಾಗಚೈತನ್ಯ ಕೂಡ ಭಾಗಿಯಾಗಲಿದ್ದಾರೆ.

ಚಿತ್ರತಂಡಕ್ಕೆ ನಾಗಚೈತನ್ಯ ಒಂದು ಷರತ್ತು ಹಾಕಿದ್ದು, ’ಮಾಧ್ಯಮದವರು ಸಮಂತಾ ಹಾಗೂ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳದಂತೆ ನೀವು ನೋಡಿಕೊಳ್ಳಬೇಕು’ ಎಂದು ಕೇಳಿಕೊಂಡಿದ್ದಾರಂತೆ! ಈ ಷರತ್ತಿಗೆ ಚಿತ್ರತಂಡ ಒಪ್ಪಿಗೆ ಸೂಚಿಸಿದೆ ಎಂಬುದು ತಿಳಿದುಬಂದಿದೆ.

ಶೇಖರ್‌ ಕಮುಲ್ಲಾ ಆ್ಯಕ್ಷನ್‌ ಕಟ್‌ ಹೇಳಿರುವ ರೊಮ್ಯಾಂಟಿಕ್‌ ಕತೆಯುಳ್ಳ ‘ಲವ್‌ ಸ್ಟೋರಿ’ ಸೆಪ್ಟೆಂಬರ್‌ 24ರಂದು ಬಿಡುಗಡೆಯಾಗಲಿದೆ. ನಾರಾಯಣ ದಾಸ್‌ ಕೆ.ನಾರಂಗ್‌ ಹಾಗೂ ಕೆ.ಪಿ ರಾಮ್‌ ಮೋಹನ್‌ ನಿರ್ಮಿಸಿರುವ ಈ ಚಿತ್ರದಲ್ಲಿ ತೆಲಂಗಾಣ ಶೈಲಿಯ ತೆಲುಗು ಭಾಷೆ ಪ್ರೇಕ್ಷಕರ ಮನರಂಜಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು