ಗುರುವಾರ , ಮೇ 19, 2022
21 °C

ನಂದಮುರಿ ಬಾಲಕೃಷ್ಣ 107 ನೇ ಚಿತ್ರ ಘೋಷಣೆ: ಶ್ರುತಿ ಹಾಸನ್ ಜೋಡಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಂದು ತೆಲುಗು ಮಾಸ್ ನಟ ನಂದಮುರಿ ಬಾಲಕೃಷ್ಣ ಅವರ 107 ನೇ ಚಿತ್ರ ಘೋಷಣೆ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಹಾಗೂ ಡಾನ್ ಸೀನು, ಕ್ರ್ಯಾಕ್ ಖ್ಯಾತಿಯ ಗೋಪಿಚಂದ್ ಮಾಲಿನೇನಿ ನಿರ್ದೇಶನದಲ್ಲಿ NBK107 ಪ್ರಾಜೆಕ್ಟ್‌ಗೆ ಚಾಲನೆ ನೀಡಲಾಗಿದೆ.

ಇಂದು ಹೈದರಾಬಾದ್‌ನಲ್ಲಿ ಬಾಲಕೃಷ್ಣ ಅವರ ಹೊಸ ಸಿನಿಮಾಕ್ಕೆ ಮಹೂರ್ತ ನೆರವೇರಿಸಿ ಪೂಜೆ ಮಾಡಲಾಗಿದೆ. ಟೈಟಲ್ ಇನ್ನೂ ಅಂತಿಮವಾಗಿಲ್ಲವಾದರೂ 'ಜೈ ಬಾಲಯ್ಯ' ಚಿತ್ರ ಇದಾಗಲಿದೆ ಎನ್ನಲಾಗುತ್ತಿದೆ.

ಚಿತ್ರ ನಿರ್ಮಾಣದ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಈ ಚಿತ್ರ ಕೌಟುಂಬಿಕ ಕಥಾ ಹಂದರವನ್ನು ಹೊಂದಿದ್ದು, ಬಾಲಕೃಷ್ಣ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು ಬಾಲಕೃಷ್ಣ ಅವರಿಗೆ ಸೌತ್ ಸಿನಿ ಸ್ಟಾರ್ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇದನ್ನು ಹೊರತುಪಡಿಸಿದಂತೆ ಬಾಲಕೃಷ್ಣ ಅವರ 'ಅಖಂಡ' ಸಿನಿಮಾ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಇದನ್ನೂ ಓದಿ: ಡೆಲಿವರಿ ನಂತರ ನನ್ನ ದೇಹವನ್ನು ನಾನು ದ್ವೇಷಿಸಬಹುದಾ? ಎಂದು ಕಾಡಿತ್ತು: ಅನುಷ್ಕಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು