ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಯ ಹಾರರ್‌

Last Updated 26 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ದುರ್ಗೆಯನ್ನು ಆರಾಧಿಸುವವಿಜಯ ದಶಮಿಯ‘ನವರಾತ್ರಿ’ ಆಚರಣೆ ಸನಿಹದಲ್ಲಿರುವಾಗಲೇ ಅದೇ ಹೆಸರಿನ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

ದುಷ್ಟಶಕ್ತಿಯ ಹಾರಾಟ ಇರುವ ಕಡೆಯಲ್ಲಿ ಅದನ್ನು ಹತ್ತಿಕ್ಕಲು ದೈವಶಕ್ತಿಯೂ ಇರಲೇಬೇಕಲ್ಲವೇ?ದುಷ್ಟಶಕ್ತಿ ಎದುರುದೈವಶಕ್ತಿಯ ಕಥಾಹಂದರ ಈ ಚಿತ್ರದಲ್ಲಿದೆ. ಟ್ರೇಲರ್‌ ಬಿಡುಗಡೆಯಾಗಿದ್ದು, ಬೋಲ್ಡ್‌ ಮತ್ತು ಹಾರರ್‌ ದೃಶ್ಯಗಳುಕುತೂಹಲಕಾರಿಯಾಗಿವೆ.ದೇವತೆ ನೆಲೆಸಿರುವ ಜಾಗದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿದರೆಏನಾಗುತ್ತದೆ ಎನ್ನುವ ಕಥೆಯನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕಹೈದರಬಾದ್‍ನ ಲಕ್ಷೀಕಾಂತ್,ಒಂದಿಷ್ಟು ಕುತೂಹಲ, ಹಾರರ್‌ ಎಲಿಮೆಂಟ್‌ ಸೇರಿಸಿ ‘ನವರಾತ್ರಿ’ಯನ್ನುಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡು ಅಥವಾ ಹೊಡೆದಾಟದ ದೃಶ್ಯಗಳಿಲ್ಲವೆನ್ನುವುದೇ ಚಿತ್ರದ ವಿಶೇಷ.

ಪದ್ಮಾವತಿ ಧಾರಾವಾಹಿಯ ತ್ರಿವಿಕ್ರಮ್ ಈ ಚಿತ್ರದ ಮೂಲಕ ನಾಯಕನಾಗಿಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ನಾಯಕಿಯಾಗಿರುವ ಹೃದಯ ಆವಂತಿಗೆ ಇದು ಮೂರನೇ ಚಿತ್ರ. ಶಿವಮಂಜು, ಕಾರ್ತಿಕ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಪ್ರಿಯಾಂಕ, ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದ ಸೋನಿಯಾ ಸೇನ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಕಾಯ್ದುಕೊಂಡಿದೆ.

‘ಕಾಫೀಸ್ ಸಿನಿಮಾ’ ಬ್ಯಾನರ್‌ನಡಿ ಆಂಧ್ರದಸಾಮಾನ್ಯರೆಡ್ಡಿ ಮತ್ತು ವಂಶಿ ಮೋಹನ್‍ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಸಂಗೀತ ನರೇಶ್‍ ಕುಮಾರನ್, ಸಂಕಲನ ಲೋಕೇಶ್‍ ಚೆನ್ನ, ಛಾಯಾಗ್ರಹಣ ರವಿ-ಪ್ರೀತಂ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT