ಶುಕ್ರವಾರ, ಜನವರಿ 28, 2022
24 °C

ವಿಘ್ನೇಶ್ ಶಿವನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಯನತಾರಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Vignesh Shivan Instagram Post

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ನಯನತಾರಾ ಗುರುವಾರ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಪತಿ ಮತ್ತು ನಿರ್ಮಾಪಕ ವಿಘ್ನೇಶ್ ಶಿವನ್ ಜತೆ ನಯನತಾರಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಸಾಮಾಜಿಕ ತಾಣದಲ್ಲಿ ಫೋಟೊ ಮತ್ತು ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಹಳದಿ ಬಣ್ಣದ ಟಾಪ್ ಮತ್ತು ಜೀನ್ಸ್ ಧರಿಸಿರುವ ನಯನತಾರಾ ಅವರ ಹುಟ್ಟುಹಬ್ಬ ಸಂಭ್ರಮದ ಫೋಟೊಗಳು ವೈರಲ್ ಆಗಿದ್ದು, ವಿಘ್ನೇಶ್ ಅವರು ಕೂಡ ಜತೆಗಿದ್ದಾರೆ.

2015ರಲ್ಲಿ ನಾನುಮ್ ರೌಡಿದಾನ್ ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡುವ ಸಂದರ್ಭ ನಯನತಾರಾ ಮತ್ತು ವಿಘ್ನೇಶ್ ಅವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು.

ನಯನತಾರಾ ಬರ್ತ್‌ಡೇ ವಿಶೇಷವಾಗಿ ವಿಘ್ನೇಶ್ ಅವರು ಮುಂಬರುವ ‘ಕಾಥವಾಕುಲ ರೇಂದು ಕಾದಲ್’ ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿ, ‘ಹ್ಯಾಪಿ ಬರ್ತ್‌ಡೇ ಕನ್ಮಣಿ’ ಎಂದು ಶುಭಹಾರೈಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು