ಗುರುವಾರ , ಜೂನ್ 30, 2022
25 °C

ನೇಹಾ ಕಕ್ಕರ್ ಜನ್ಮದಿನ: ಪತ್ನಿಗೆ ಪ್ರೀತಿಯಿಂದ ಶುಭಕೋರಿದ ರೋಹನ್ ಪ್ರೀತ್ ಸಿಂಗ್

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Rohanpreet Singh Instagram

ಬೆಂಗಳೂರು: ಬಾಲಿವುಡ್‌ನಲ್ಲಿ ತಮ್ಮ ಗಾಯನ ಪ್ರತಿಭೆ ಮತ್ತು ಸೌಂದರ್ಯದ ಮೂಲಕ ಸುದ್ದಿಯಲ್ಲಿರುವ ನೇಹಾ ಕಕ್ಕರ್ ಜೂನ್ 6ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ರಿಷಿಕೇಶ ಮೂಲದವರಾದ ಅವರು, ನಾಲ್ಕನೇ ವಯಸ್ಸಿನಲ್ಲಿಯೇ ವಿವಿಧ ವೇದಿಕೆಗಳಲ್ಲಿ ಸಂಗೀತ ಸುಧೆ ಹರಿಸಿದ್ದರು. ಅಲ್ಲದೆ, ಇಂಡಿಯನ್ ಐಡಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಜನ್ಮದಿನದ ಸಂದರ್ಭದಲ್ಲಿ ನೇಹಾ ಪತಿ ರೋಹನ್‌ಪ್ರೀತ್ ಸಿಂಗ್, ಪತ್ನಿಗೆ ವಿಶೇಷ ಅಕ್ಕರೆಯಿಂದ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನೇಹಾ ಕಕ್ಕರ್ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿರುವ ರೋಹನ್,  ಜೀವನದ ಪ್ರತಿ ಕ್ಷಣದಲ್ಲೂ ನಿನ್ನೊಂದಿರುತ್ತೇನೆ. ನಿನ್ನ ಪತಿಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ, ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ, ದೇವರು ನಿನಗೆ ಒಳ್ಳೆಯದು ಮಾಡಲಿ ನನ್ನ ರಾಣಿ ನೇಹು.. ಎಂದು ಹೃದಯದ ಎಮೋಜಿ ಬಳಸಿ ಚಿತ್ರಕ್ಕೆ ಅಡಿಬರಹ ನೀಡಿದ್ದಾರೆ.

ಕನ್ನಡ ಸಹಿತ ಹಲವು ಭಾಷೆಗಳ ಚಲನಚಿತ್ರ ಗೀತೆಗಳನ್ನು ನೇಹಾ ಕಕ್ಕರ್ ಹಾಡಿದ್ದು, ಅವು ಅತಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅಲ್ಲದೆ, ನೇಹಾ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲೂ ಎರಡು ಬಾರಿ ಸ್ಥಾನ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು