ಮುಂಬೈ: ಆರ್ಟಿಕಲ್ 370 ಸಿನಿಮಾ ಖ್ಯಾತಿಯ ಆದಿತ್ಯ ಜಂಬಾಲೆ ನಿರ್ದೇಶನದ ‘ಬಾರಾಮುಲ್ಲಾ’ ವೆಬ್ ಸಿರೀಸ್ ಇದೇ ನವೆಂಬರ್ 7 ರಂದು ಬಿಡುಗಡೆಯಾಗಲಿದೆ ಎಂದು ನೆಟ್ಫ್ಲಿಕ್ಸ್ ಇಂಡಿಯಾ ತಿಳಿಸಿದೆ.

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಬ್ಯಾನರ್ನಲ್ಲಿ ಜ್ಯೋತಿ ದೇಶಪಾಂಡೆ ಹಾಗೂ ಆದಿತ್ಯ ಧರ್ ನಿರ್ಮಿಸುತ್ತಿದ್ದಾರೆ.

ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೊಂದು ಸೂಪರ್ ನ್ಯಾಚುರಲ್ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾವಾಗಿದೆ ಎಂದು ನೆಟ್ಫ್ಲಿಕ್ಸ್ ಇಂಡಿಯಾ ಹೇಳಿದೆ.

ನಟ ಮಾನವ್ ಕೌಲ್ ಅವರು ಈ ವೆಬ್ ಸಿರೀಸ್ನಲ್ಲಿ ಡಿಎಸ್ಪಿ ಸೈಯದ್ ಆಗಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಹಿಮಪಾತದ ವೇಳೆ ಮಕ್ಕಳು ಕಾಣೆಯಾಗುತ್ತಿರುವ ಸಂಗತಿ ಹಾಗೂ ಅತಿಮಾನುಷ ಶಕ್ತಿಗಳ ಹಿನ್ನೆಲೆಯ ಕಥೆಯನ್ನು ಈ ಚಿತ್ರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.