‘ಜಯಂ‘ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ ಮುದ್ದು ಮುಖದ ಹುಡುಗ ನಿತಿನ್ ಒಂದಷ್ಟು ಕಾಲ ಹಿಟ್ ಚಿತ್ರಗಳನ್ನೇ ನೀಡಿದ್ದಾರೆ. ಸಿನಿಮಾರಂಗದಲ್ಲಿ ಏಳುಬೀಳುಗಳನ್ನು ಸಮಾನವಾಗಿ ಕಂಡ ನಿತಿನ್ 2016ರಲ್ಲಿ ಅಭಿನಯಿಸಿದ್ದ ‘ಅ ಆ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತ್ತು.ಆದರೆ, ನಂತರ ತೆರೆಕಂಡ ಚಲ್ ಮೋಹನ್ ರಂಗ, ಲೈ, ಶ್ರೀನಿವಾಸ ಕಲ್ಯಾಣಂ ಚಿತ್ರಗಳು ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ಸದ್ಯಕ್ಕೆ ನಿತಿನ್ ಅಭಿನಯದ ಭೀಷ್ಮ, ರಂಗ್ ದೇ ಹಾಗೂ ಚಂದ್ರಶೇಖರ್ ಯೆಲೆಟಿ ನಿರ್ದೇಶನದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾಗಳಲ್ಲೂ ನಿತಿನ್‌ಗೆ ಅದೃಷ್ಟ ಕೈ ಕೊಟ್ಟರೆ ಅವರು ಮರಳಿ ಎದ್ದೇಳುವುದು ಕಷ್ಟ ಎನ್ನುತ್ತಿವೆ ಮೂಲಗಳು.

ಈ ನಡುವೆ ನಿತಿನ್ ತಂದೆ, ಸಿನಿಮಾ ವಿತರಕ ಸುಧಾಕರ್ ರೆಡ್ಡಿ ಹಿಂದಿಯ ಸೂಪರ್ ಹಿಟ್ ‘ಅಂಧಾದುನ್‘ ಸಿನಿಮಾದ ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಆಯುಷ್ಮಾನ್ ಖುರಾನಾ ಅಭಿನಯದ ಈ ಸಿನಿಮಾದ ಸಣ್ಣ ಬಜೆಟ್‌ನ ಸಿನಿಮಾವಾದರೂ ಅನೇಕ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತ್ತು. ಸ್ವಾಮಿ ರಾರಾ ಸಿನಿಮಾದ ನಿರ್ದೇಶಕ ಸುಧೀರ್ ವರ್ಮಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಮೂಲಗಳ ಪ್ರಕಾರ ನಿತಿನ್ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಅದರೊಂದಿಗೆ, ವಿಶ್ವಕ್ ಸೇನ್‌ರಂತಹ ಯುವ ನಾಯಕನನ್ನು ಈ ಸಿನಿಮಾಕ್ಕೆ ನಾಯಕನನ್ನಾಗಿಸಲು ನಿತಿನ್ ಯೋಚಿಸುತ್ತಿದ್ದಾರೆ. ಅದರೊಂದಿಗೆ ಚಿತ್ರಕ್ಕೆ ಹೊಸ ನಿರ್ದೇಶಕರನ್ನು ಹುಡುಕಲಾಗುತ್ತಿದೆ. ಆ ವಿಷಯ ನಿಜವಾದರೆ ನಿತಿನ್ ಅವರ ಈ ಕಾರ್ಯಕ್ಕೆ ನಾವು ಮೆಚ್ಚುಗೆ ಸೂಚಿಸಬೇಕಾಗಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿತಿನ್ ಯೋಚನೆ ನಿಜಕ್ಕೂ ಗ್ರೇಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.