ಗುರುವಾರ , ಸೆಪ್ಟೆಂಬರ್ 23, 2021
23 °C

ಜುಲೈ 26ಕ್ಕೆ ನಟ ನಿತಿನ್‌–ಶಾಲಿನಿ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ‘ಭೀಷ್ಮ’ ಚಿತ್ರದ ಖ್ಯಾತಿಯ ನಟ ನಿತಿನ್‌ ಮತ್ತು ಶಾಲಿನಿ ಜುಲೈ 26ರಂದು ಹಸೆಮಣೆ ಏರಲಿದ್ದಾರೆ. ಅಂದು ಹೈದರಾಬಾದ್‌ನ ಹೋಟೆಲ್‌ವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ.

ಕಳೆದ ಫೆಬ್ರುವರಿಯಲ್ಲಿಯೇ ಈ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಏಪ್ರಿಲ್‌ನಲ್ಲಿಯೇ ದುಬೈನಲ್ಲಿ ಮದುವೆ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕೊರೊನಾ ಸೋಂಕು ಹಬ್ಬುತ್ತಿದ್ದ ಪರಿಣಾಮ ಮದುವೆಯನ್ನು ಮಂದೂಡಲಾಗಿತ್ತು. ಈಗ ಹೈದರಾಬಾದ್‌ನಲ್ಲಿ ಮದುವೆ ನೆರವೇರಿಸಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.

ನಿತಿನ್‌ ಮತ್ತು ಶಾಲಿನಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಎರಡು ಕುಟುಂಬಗಳ ಸದಸ್ಯರ ಅನುಮತಿ ಮೇರೆಗೆ ಮದುವೆಯಾಗುತ್ತಿದ್ದಾರೆ. ನಿತಿನ್‌ ನಟಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿದ್ದವು. ಇದರಿಂದ ಕೆಂಗೆಟ್ಟಿದ್ದ ಅವರಿಗೆ ‘ಭೀಷ್ಮ’ ಸಿನಿಮಾದ ಗೆಲುವು ಹೊಸ ಹುರುಪು ನೀಡಿತ್ತು. ಇದರಲ್ಲಿ ನಿತಿನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಟಾಲಿವುಡ್‌ನಲ್ಲಿ ಕಂಕಣಭಾಗ್ಯ ತುಳಿಯುತ್ತಿರುವ ನಟರ ಪಟ್ಟಿ ಏರುತ್ತಿದೆ. ನಟ ರಾನಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ನಿಶ್ಚಿತಾರ್ಥ ನೆರವೇರಿದ್ದು, ಮುಂದಿನ ತಿಂಗಳು ಈ ಜೋಡಿ ವೈವಾಹಿಕ ಜೀವನಕ್ಕೆ ಅಡಿ ಇಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು