ಈ ವರ್ಷ ಬಿಡುಗಡೆಗೆ ಬಾಕಿ ಇರುವ ಸಿನಿಮಾಗಳ ಸಂಖ್ಯೆ 50ಕ್ಕೂ ಹೆಚ್ಚಿವೆ. ಆದಾಗ್ಯೂ ಈ ವಾರ ಯಾವುದೇ ಸಿನಿಮಾಗಳು ತೆರೆ ಕಾಣುತ್ತಿಲ್ಲ. ಚಿತ್ರಮಂದಿರಗಳ ಸಮಸ್ಯೆ, ವಾರಕ್ಕೆ ಆರೆಂಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ, ದೊಡ್ಡ ಸಿನಿಮಾಗಳಿವೆ, ಹೀಗಾಗಿ ನಮ್ಮ ಸಿನಿಮಾ ತೆರೆಗೆ ಬರುತ್ತಿಲ್ಲ ಎಂಬ ಮಾತು ಸಾಮಾನ್ಯವಾಗಿತ್ತು. ಆದರೆ ಚಿತ್ರಮಂದಿರಗಳು ಲಭ್ಯವಿದ್ದು, ಯಾವುದೇ ದೊಡ್ಡ ಸಿನಿಮಾಗಳು ತೆರೆಯಲ್ಲಿ ಇಲ್ಲದಿದ್ದರೂ ಕೂಡ 2025ರಲ್ಲಿ ಇದೇ ಮೊದಲು ಈ ವಾರ ಯಾವುದೇ ಸಿನಿಮಾಗಳು ತೆರೆ ಕಂಡಿಲ್ಲ.

ಈಗಾಗಲೇ 220ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೊಂಡಿವೆ. ವಾರಕ್ಕೆ ಸರಾಸರಿ ಐದು ಸಿನಿಮಾಗಳು ತೆರೆಕಂಡ ವಾರಗಳೇ ಹೆಚ್ಚು. ಈ ವರ್ಷದ ಮೊದಲ ಮೂರು ತಿಂಗಳು ಚಿತ್ರಮಂದಿರಗಳಲ್ಲಿ ಅಕ್ಷರಶಃ ಸಿನಿಮಾಗಳ ಪ್ರವಾಹವೇ ಹರಿದಿತ್ತು. ಆದರೂ ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆಗೆ ಬಹುತೇಕ ನಿರ್ಮಾಪಕರು ಹಿಂದೇಟು ಹಾಕಿದ್ದಾರೆ.

ನವೆಂಬರ್ನಲ್ಲಿ ಪ್ರತಿ ವಾರ ಸರಾಸರಿ ಐದು ಸಿನಿಮಾಗಳು ತೆರೆ ಕಂಡಿವೆ. 8–10 ಸಿನಿಮಾಗಳು ತೆರೆಕಂಡ ವಾರಗಳೂ ಇವೆ. ಆದರೆ ಡಿಸೆಂಬರ್ಗೆ ಈ ಸಂಖ್ಯೆ ಹಠಾತ್ ಕುಸಿದಿದೆ. ಹಿಂದಿನ ವಾರ ಕೂಡ ‘ಡೆವಿಲ್’ ಬಿಟ್ಟರೆ ಬಿಡುಗಡೆಗೊಂಡಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ತಿಂಗಳ ಮೊದಲ ವಾರದಲ್ಲಿಯೂ ಸಿನಿಮಾ ಬಿಡುಗಡೆ ಅಬ್ಬರ ಅಷ್ಟಾಗಿ ಇರಲಿಲ್ಲ. ‘ಡೆವಿಲ್’ ಕೂಡ ನಿರೀಕ್ಷಿತ ಮಟ್ಟದ ಗಳಿಕೆ ಕಾಣಲಿಲ್ಲ. ಆದರೂ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಸಿದ್ಧವಿಲ್ಲ.

‘ಕಾಂತಾರ–1’ ಬಳಿಕ ಯಾವುದೇ ಕನ್ನಡ ಸಿನಿಮಾ ಜನರನ್ನು ಸೆಳೆದಿಲ್ಲ. ಬಿಡುಗಡೆಗೊಂಡ ಸಿನಿಮಾಗಳನ್ನು ಜನ ಸ್ವೀಕರಿಸುತ್ತಿಲ್ಲ. ಕಳೆದ ವಾರ ‘ಡೆವಿಲ್’, ‘ಅಖಂಡ’ ಸಿನಿಮಾಗಳು ಬಿಡುಗಡೆಗೊಂಡಿವೆ. ಜತೆಗೆ ಮುಂದಿನ ವಾರ ಎರಡು ದೊಡ್ಡ ಸಿನಿಮಾಗಳಿವೆ. ಹೀಗಾಗಿ ಯಾರೂ ಕೂಡ ಸಿನಿಮಾ ಬಿಡುಗಡೆ ಧೈರ್ಯ ಮಾಡುತ್ತಿಲ್ಲ’ ಎನ್ನುತ್ತಾರೆ ವಿತರಕ ಎಂ.ಪಿ.ಫಿಲ್ಮ್ಸ್ನ ಮುನೀಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.