ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಫ್‌ ಅಲಿ ಖಾನ್‌ ಹುಟ್ಟುಹಬ್ಬಕ್ಕೆ 'ದೇವರಾ' ಚಿತ್ರದ ಪೋಸ್ಟರ್‌ ಹಂಚಿಕೊಂಡ NTR

Published 16 ಆಗಸ್ಟ್ 2023, 13:04 IST
Last Updated 16 ಆಗಸ್ಟ್ 2023, 13:04 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ನ 53ನೇ ಹುಟ್ಟುಹಬ್ಬದ ಪ್ರಯುಕ್ತ ‘ದೇವರಾ‘ ಚಿತ್ರದಲ್ಲಿನ ಭೈರಾ ಪಾತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಹಂಚಿಕೊಂಡಿದೆ.

ತೆಲುಗು ನಟ ಜೂನಿಯರ್‌ NTR ಇಂದು (ಬುಧವಾರ) ಚಿತ್ರದಲ್ಲಿನ ಸೈಫ್‌ ಅಲಿ ಖಾನ್‌ ಪಾತ್ರದ ಪೋಸ್ಟರ್‌ರನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು, ಹುಟ್ಟುಹಬ್ಬದ ಶುಭಾಶಯಗಳು ಭೈರಾ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿನ ಜೂನಿಯರ್‌ NTR ಪಾತ್ರದ ಮೊದಲ ಲುಕ್‌ನ ಪೋಸ್ಟರ್‌ ಅನ್ನು ಚಿತ್ರತಂಡ ಮೇ ತಿಂಗಳಲ್ಲಿ ಅನಾವರಣಗೊಳಿಸಿತ್ತು.

ಕೊರಟಾಲ ಶಿವ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಬ್ಯಾನರ್‌ ನಿರ್ಮಿಸುತ್ತಿದೆ.

ಈ ಚಿತ್ರ 2024ರ ಏಪ್ರಿಲ್ 5ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇತ್ತೀಚಿಗೆ ಪ್ರಭಾಸ್‌ ನಟನೆಯ 'ಆದಿ ಪುರುಷ್‌' ಚಿತ್ರದಲ್ಲಿ ಸೈಫ್‌ ಅಲಿ ಖಾನ್‌, ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT