ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ವೇದಿಕೆಯಲ್ಲಿ 'ನಾಟು...ನಾಟು...' ಹಾಡು LIVE ಪ್ರದರ್ಶನ

Last Updated 1 ಮಾರ್ಚ್ 2023, 5:47 IST
ಅಕ್ಷರ ಗಾತ್ರ

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ 'ನಾಟು...ನಾಟು...' ಹಾಡು ಅತ್ಯುತ್ತಮ ಮೂಲ ಗೀತೆ (ಒರಿಜನಲ್) ವರ್ಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ.

ಈಗ 95ನೇ ಅಕಾಡೆಮಿ ಅವಾರ್ಡ್ಸ್‌ ವೇದಿಕೆಯಲ್ಲಿ ಚಿತ್ರದ ಜನಪ್ರಿಯ 'ನಾಟು...ನಾಟು...' ಹಾಡು ಲೈವ್ ಆಗಿ ಪ್ರದರ್ಶನವಾಗಲಿದೆ ಎಂದು ವರದಿಯಾಗಿದೆ.

ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಅಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಈ ಹಾಡನ್ನು ಹಾಡಲಿದ್ದಾರೆ ಎಂದು 'ದಿ ಅಕಾಡೆಮಿ' ತಿಳಿಸಿದೆ.

ನಾಟು ನಾಟು ಹಾಡು ಈಗಾಗಲೇ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾಗಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿರುವ ಆರ್‌ಆರ್‌ಆರ್ ಈಗ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಈ ಹಾಡಿನ ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT