ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಯಾ ಭಟ್ ಸಿನಿಮಾ: ಪೂರ್ತಿ ಥಿಯೇಟರ್ ಬುಕ್‌ ಮಾಡಿದ ಪಾಕ್‌ ನಟ

Last Updated 25 ಮಾರ್ಚ್ 2022, 12:20 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟಿ ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯವಾಡಿ‘ ಸಿನಿಮಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು. ಅದೇ ಸಿನಿಮಾ, ವಿದೇಶದಲ್ಲೂ ಜನ ಮೆಚ್ಚುಗೆ ಗಳಿಸಿದೆ.

ಹೀಗಿರುವಾಗ, ಗಂಗೂಬಾಯಿ ಸಿನಿಮಾ ನೋಡಲು ಪಾಕಿಸ್ತಾನದ ನಟ ಮುನೀಬ್ ಭಟ್, ಪೂರ್ತಿ ಥಿಯೇಟರ್ ಅನ್ನೇ ಬುಕ್ ಮಾಡಿದ್ದಾರೆ.

ಪತ್ನಿ ಮತ್ತು ಕುಟುಂಬದ ಜತೆ ಖಾಸಗಿಯಾಗಿ ಸಿನಿಮಾ ನೋಡುವ ಸಲುವಾಗಿ ಮುನೀಬ್, ಚಿತ್ರಮಂದಿರ ಬುಕ್ ಮಾಡಿದ್ದರು.

ಈ ಕುರಿತ ವಿಡಿಯೊ ಒಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಮುನೀಬ್ ಪತ್ನಿ ಅವರು ಕುಟುಂಬದ ಜತೆ ‘ಗಂಗೂಬಾಯಿ ಕಾಠಿಯವಾಡಿ‘ ಸಿನಿಮಾ ವೀಕ್ಷಿಸುವ ದೃಶ್ಯವಿದೆ.

ಭಾರತೀಯ ಸಿನಿಮಾ ವೀಕ್ಷಣೆಗೆ ಪೂರ್ತಿ ಥಿಯೇಟರ್ ಬುಕ್ ಮಾಡಿರುವ ಪಾಕ್ ನಟನ ನಡೆಗೆ ಅಲ್ಲಿನ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ನಟರಿಗೇ ಇಲ್ಲಿನವರ ಸಿನಿಮಾ ರುಚಿಸುತ್ತಿಲ್ಲ. ಹೀಗಾಗಿ ಭಾರತೀಯರ ಸಿನಿಮಾ ನೋಡುತ್ತಿದ್ದಾರೆ, ನಮ್ಮ ನಟರಿಗೆ ದೇಶಭಕ್ತಿ ಇಲ್ಲ ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT